HEALTH TIPS

ಎಥೆನಾಲ್‌ ಉತ್ಪಾದನೆಗೆ 13 ಲಕ್ಷ ಟನ್‌ ಅಕ್ಕಿ

             ವದೆಹಲಿ: ಕೇಂದ್ರ ಸರ್ಕಾರದ ಅಧೀನದ ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಈ ವರ್ಷದ ಜುಲೈ 10ರವರೆಗೆ ಉತ್ತಮ ಗುಣಮಟ್ಟದ 13.05 ಲಕ್ಷ ಟನ್‌ ಅಕ್ಕಿಯನ್ನು ಎಥೆನಾಲ್‌ ಉತ್ಪಾದನೆಗೆ ಪೂರೈಕೆ ಮಾಡಿದೆ. ಈ ಮೂಲಕ ₹2,610 ಕೋಟಿ ವರಮಾನ ಗಳಿಸಿದೆ.

              ಲೋಕಸಭೆಯಲ್ಲಿ ಸದಸ್ಯ ಜಯದೇವ ಗಲ್ಲಾ ಅವರು ಬುಧವಾರ ಕೇಳಿರುವ ಪ್ರಶ್ನೆಗೆ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಲಿಖಿತ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.

                ಮಾನವ ಬಳಕೆಗೆ ಉಪಯುಕ್ತವಲ್ಲದ ಅಕ್ಕಿ, ಜೋಳ ಸೇರಿದಂತೆ ಆಹಾರ ಧಾನ್ಯಗಳನ್ನು ಬಳಸಿ ಎಥೆನಾಲ್‌ ಉತ್ಪಾದನೆಯನ್ನು ಹೆಚ್ಚಿಸಲು ರಾಷ್ಟ್ರೀಯ ಜೈವಿಕ ಇಂಧನ ಯೋಜನೆ 2018ಕ್ಕೆ ಸರ್ಕಾರವು ತಿದ್ದುಪಡಿ ತಂದಿತ್ತು. ಆದರೆ, ಎಫ್‌ಸಿಐ ಬಳಿ ಇರುವ ಉತ್ತಮ ಗುಣಮಟ್ಟದ ಹೆಚ್ಚುವರಿ ಅಕ್ಕಿಯನ್ನೂ ಎಥೆನಾಲ್‌ ಉತ್ಪಾದನೆಗೆ ಬಳಸಬಹುದು ಎಂದು 2020ರಲ್ಲಿ ಮತ್ತೊಮ್ಮೆ ತಿದ್ದುಪಡಿ ತರಲಾಗಿದೆ. ಹೀಗಾಗಿ, ಕಳೆದ ಮೂರು ವರ್ಷಗಳಲ್ಲಿ 24.22 ಲಕ್ಷ ಟನ್‌ ಅಕ್ಕಿಯನ್ನು ಎಥೆನಾಲ್‌ ಉತ್ಪಾದನೆಗೆ ಬಳಸಿಕೊಳ್ಳಲಾಗಿದೆ.

                 ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಸಚಿವರು, 'ಕೇಂದ್ರದ ಪೂಲ್‌ನಲ್ಲಿ ಜುಲೈ 1ಕ್ಕೆ ಅನ್ವಯವಾಗುವಂತೆ 253 ಲಕ್ಷ ಟನ್‌ ಅಕ್ಕಿ ಹಾಗೂ 301 ಲಕ್ಷ ಟನ್‌ ಗೋಧಿ ದಾಸ್ತಾನು ಇದೆ' ಎಂದು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 317 ಲಕ್ಷ ಟನ್‌ ಅಕ್ಕಿ ದಾಸ್ತಾನು ಇತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

              'ಆಹಾರ ಧಾನ್ಯ ಸಂಗ್ರಹದ ನಿಯಮಗಳ ಪ್ರಕಾರ, ಕೇಂದ್ರ ಪೂಲ್‌ನಲ್ಲಿ ಏಪ್ರಿಲ್‌ನಲ್ಲಿ 135 ಲಕ್ಷ ಟನ್‌, ಜುಲೈನಲ್ಲಿ 135.40 ಲಕ್ಷ ಟನ್‌, ಅಕ್ಟೋಬರ್‌ನಲ್ಲಿ 102.20 ಲಕ್ಷ ಟನ್ ಹಾಗೂ ಜನವರಿಯಲ್ಲಿ 75 ಲಕ್ಷ ಟನ್‌ ಅಕ್ಕಿ ದಾಸ್ತಾನು ಇರಬೇಕು' ಎಂದು ಅವರು ವಿವರ ನೀಡಿದ್ದಾರೆ.

                                               ಆಹಾರ ಸಬ್ಸಿಡಿ:

               ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ಕರ್ನಾಟಕಕ್ಕೆ 2020-21ರಲ್ಲಿ ₹324 ಕೋಟಿ, 2021-22ರಲ್ಲಿ ₹1,682 ಕೋಟಿ ಹಾಗೂ 2022-23ರಲ್ಲಿ ₹2,192 ಕೋಟಿ ಆಹಾರ ಸಬ್ಸಿಡಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries