HEALTH TIPS

ಜುಲೈ 14 ರಂದು ಮಧ್ಯಾಹ್ನ 2.35ಕ್ಕೆ ಭಾರತದ ಚಂದ್ರಯಾನ-3 ಉಡಾವಣೆ

               ಬೆಂಗಳೂರು: ಚಂದಿರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಮೂರನೇ ಪ್ರಯತ್ನ ಅಂತಿಮ ಘಟ್ಟ ತಲುಪಿದ್ದು, ಜುಲೈ 14 ರಂದು ಮಧ್ಯಾಹ್ನ 2.35ಕ್ಕೆ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದೆ.

            ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಮಿಷನ್  ಶ್ರೀಹರಿಕೋಟದಿಂದ ಉಡಾವಣೆಯಾಗಲಿದೆ. ಹೆಚ್ಚಿನ ಅಪ್ಡೇಟ್  ನಿರೀಕ್ಷಿಸಿ ಎಂದು ಗುರುವಾರ ಇಸ್ರೋ ಟ್ವೀಟ್ ಮಾಡಿದೆ.

                ಚಂದ್ರಯಾನ- 3 ಬಾಹ್ಯಾಕಾಶ ನೌಕೆಯನ್ನು ಒಳಗೊಂಡ ಪೇಲೋಡ್ ಅನ್ನು ಜಿಯೋ ಸಿಂಕ್ರೊನಸ್ ಲಾಂಚ್ ವೆಹಿಕಲ್ ಮಾರ್ಕ್ III (ಜಿಎಸ್‌ಎಲ್‌ವಿ ಎಂಕೆ-III) ಉಡಾವಣಾ ನೌಕೆಗೆ ಬುಧವಾರ ಸೇರ್ಪಡೆಗೊಳಿಸಲಾಗಿದೆ.

                 ಈ ಮುಂಚೆ ಬಹು ನಿರೀಕ್ಷಿತ ಚಂದ್ರಯಾನ-3 ಜುಲೈ 13 ರಂದು ಉಡಾವಣೆಗೊಳ್ಳಲಿದೆ ಎಂದು ಇಸ್ರೋ ಘೋಷಿಸಿತ್ತು. ಇದೀಗ ಉಡಾವಣೆ ಜುಲೈ 14 ರಂದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆ ನಡೆಯಲಿದೆ ಎಂದು ಇಸ್ರೋ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries