ವಿಶ್ವಸಂಸ್ಥೆ: 2005-2006 ರಿಂದ 2019-2021 ರವರೆಗೆ ಕೇವಲ 15 ವರ್ಷಗಳಲ್ಲಿ ಭಾರತದಲ್ಲಿ ಒಟ್ಟು 415 ಮಿಲಿಯನ್ ಜನರು ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ. ಇದು ವಿಶ್ವದ ಅತ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಷ್ಟ್ರದ ಗಮನಾರ್ಹ ಸಾಧನೆಯನ್ನು ಎತ್ತಿ ತೋರಿಸುತ್ತದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಆಕ್ಸ್‌ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದಿಂದ ಬಹು ಆಯಾಮದ ಜಾಗತಿಕ ಬಡತನ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗಿದೆ. ಭಾರತ ಸೇರಿದಂತೆ 25 ದೇಶಗಳು 15 ವರ್ಷಗಳಲ್ಲಿ ಜಾಗತಿಕ ಬಡತನ ಸೂಚ್ಯಂಕ ಮೌಲ್ಯಗಳನ್ನು ಯಶಸ್ವಿಯಾಗಿ ಅರ್ಧಕ್ಕೆ ಇಳಿಸಿವೆ. ಇದು ತ್ವರಿತ ಪ್ರಗತಿ ಸಾಧಿಸಬಹುದು ಎಂಬುದನ್ನುತೋರಿಸುತ್ತದೆ.
ಈ ದೇಶಗಳಲ್ಲಿ ಕಾಂಬೋಡಿಯಾ, ಚೀನಾ, ಕಾಂಗೋ, ಹೊಂಡುರಾಸ್, ಭಾರತ, ಇಂಡೋನೇಷಿಯಾ, ಮೊರಾಕೊ, ಸೆರ್ಬಿಯಾ ಮತ್ತು ವಿಯೆಟ್ನಾಂ ಸೇರಿವೆ.ಯುಎನ್ ಅಂಕಿಅಂಶಗಳ ಪ್ರಕಾರ, ಏಪ್ರಿಲ್‌ನಲ್ಲಿ ಭಾರತ 142.86 ಕೋಟಿ ಜನರೊಂದಿಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಚೀನಾವನ್ನು ಮೀರಿಸಿದೆ.
ಭಾರತದಲ್ಲಿ ಗಮನಾರ್ಹವಾಗಿ ಬಡತನ ಇಳಿಕೆಯಾಗಿದೆ. ಕೇವಲ 15 ವರ್ಷಗಳ (2005/6-19/21) ಅವಧಿಯಲ್ಲಿ 415 ಮಿಲಿಯನ್ ಜನರು ಬಡತನದಿಂದ ಹೊರಗೆ ಬಂದಿದ್ದಾರೆ. ಎಂದು ವರದಿ ಹೇಳಿದೆ. ಭಾರತದಲ್ಲಿ ಎಲ್ಲಾ ಸೂಚಕಗಳಲ್ಲಿನ ಅಭಾವ ಕಡಿಮೆಯಾಗಿದೆ. ಮಕ್ಕಳು ಮತ್ತು ಹಿಂದುಳಿದ ಜಾತಿ ಗುಂಪುಗಳ ಜನರು ಸೇರಿದಂತೆ ಬಡತನ ವಿರುವ ರಾಜ್ಯಗಳು ಅತ್ಯಂತ ವೇಗವಾಗಿ ಸಂಪೂರ್ಣ ಪ್ರಗತಿಯನ್ನು ಹೊಂದಿವೆ ಎಂದು ವರದಿ ಹೇಳಿದೆ.
ಭಾರತದಲ್ಲಿ ಬಹು ಆಯಾಮದ ಬಡವರು ಮತ್ತು ಪೌಷ್ಟಿಕಾಂಶದಿಂದ ವಂಚಿತರಾದ ಜನರು 2005-2006 ರಲ್ಲಿ ಶೇ. 44.3 ರಿಂದ 2019-2021 ರಲ್ಲಿ ಶೇ. 11.8ಕ್ಕೆ ಇಳಿದಿದ್ದಾರೆ ಮತ್ತು ಮಕ್ಕಳ ಮರಣವು ಶೇ. 4.5 ರಿಂದ ಶೇ. 1.5ಕ್ಕೆ ಇಳಿದೆ. ಈ ಅವಧಿಯಲ್ಲಿ ಕುಡಿಯುವ ನೀರು ವಂಚಿತ ಜನರು ಶೇ. 16.4 ರಿಂದ ಶೇ. 2.7, ವಿದ್ಯುತ್ ವಂಚಿತರಾದವರು ಶೇ. 29 ರಿಂದ ಶೇ, 2.1 ಮತ್ತು ವಸತಿ ರಹಿತರು ಶೇ. 44.9 ರಿಂದ ಶೇ. 13.6ಕ್ಕೆ ಇಳಿದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.