ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಟೊಮೆಟೊ ದರ ₹100 ದಾಟಿದ್ದು, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕೆ.ಜಿ ಟೊಮೆಟೊ ದರ ₹155 ತಲುಪಿದೆ.
ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಟೊಮೆಟೊ ದರ ₹100 ದಾಟಿದ್ದು, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕೆ.ಜಿ ಟೊಮೆಟೊ ದರ ₹155 ತಲುಪಿದೆ.
ಮೆಟ್ರೊ ನಗರಗಳ ಪೈಕಿ ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಟೊಮೆಟೊ ದರ ಅತೀ ಹೆಚ್ಚು ಇದೆ. ಅಲ್ಲಿ ಕೆ.ಜಿಗೆ ₹ 148 ಇದೆ. ಮುಂಬೈನಲ್ಲಿ ಅತಿ ಕಡಿಮೆ ಅಂದರೆ ಕೆ.ಜಿಗೆ ₹58 ಇದೆ.
ದೆಹಲಿ ಹಾಗೂ ಚೆನ್ನೈನಲ್ಲಿ ಕೆ.ಜಿಗೆ ಕ್ರಮವಾಗಿ ₹110 ಹಾಗೂ ₹117 ಇದೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ದತ್ತಾಂಶ ಪ್ರಕಾರ ದೇಶದಾದ್ಯಂತ ಟೊಮೆಟೊ ದರ ಕೆ.ಜಿಗೆ ಸರಾಸರಿ ₹ 83.29 ಇದೆ. ಸಾಮಾನ್ಯವಾಗಿ ಕೆ.ಜಿಗೆ ₹100 ಇದೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಟೊಮೆಟೊ ದರ ದೇಶದಲ್ಲೇ ಅತಿ ಹೆಚ್ಚು ಅಂದರೆ ಕೆ.ಜಿಗೆ ₹155 ಇದೆ ಎಂದು ದತ್ತಾಂಶದಿಂದ ಗೊತ್ತಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುಣಮಟ್ಟ ಹಾಗೂ ಲಭ್ಯತೆ ಆಧಾರದಲ್ಲಿ ಟೊಮೆಟೊ ಕೆ.ಜಿಗೆ ₹120 - 140ಗೆ ಬಿಕರಿಯಾಗುತ್ತಿದೆ.