ಬೀಜಿಂಗ್: ನೈರುತ್ಯ ಚೀನಾದ ಪರ್ವತ ಪ್ರದೇಶಗಳಿಗೆ ಧಾರಾಕಾರ ಮಳೆ ಅಪ್ಪಳಿಸಿದ್ದರಿಂದ ಕನಿಷ್ಠ 15 ಮಂದಿ ಪ್ರವಾಹಕ್ಕೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬೀಜಿಂಗ್: ನೈರುತ್ಯ ಚೀನಾದ ಪರ್ವತ ಪ್ರದೇಶಗಳಿಗೆ ಧಾರಾಕಾರ ಮಳೆ ಅಪ್ಪಳಿಸಿದ್ದರಿಂದ ಕನಿಷ್ಠ 15 ಮಂದಿ ಪ್ರವಾಹಕ್ಕೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ವಿಶಾಲವಾದ ಪರ್ವತ ಪ್ರದೇಶವಾದ ಚಾಂಗ್‌ಕಿಂಗ್‌ನಲ್ಲಿ ಮಧ್ಯರಾತ್ರಿ ಇನ್ನೂ ನಾಲ್ಕು ಜನ ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಸರ್ಕಾರದ ವೆಬ್‌ಸೈಟ್ ಮಾಹಿತಿ ನೀಡಿದೆ.
ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ನೈಋತ್ಯ ಪ್ರಾಂತ್ಯದ ಸಿಚುವಾನ್ ಒಂದರಿಂದಲೇ 85,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಷಿನ್‌ಹುವಾ ವರದಿ ಮಾಡಿದೆ.
ಚಾಂಗ್‌ಕಿಂಗ್‌ನಲ್ಲಿ ಪ್ರವಾಹದ ಬಿಕ್ಕಟ್ಟು 4ನೇ ಹಂತದಿಂದ 3ನೇ ಹಂತಕ್ಕೆ ತಲುಪಿದ್ದು, ಅಪಾಯದ ಗಂಭೀರತೆಯನ್ನು ತೋರುತ್ತಿದೆ. ಗಾಳಿ ತುಂಬಿದ ದೋಣಿಗಳಲ್ಲಿ ಪಾರುಗಾಣಿಕಾ ತಂಡಗಳು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾರೆ. ಭೂಕುಸಿತದಿಂದ ಮುಚ್ಚಿರುವ ರಸ್ತೆಗಳನ್ನು ಕಾರ್ಮಿಕರು ತೆರವು ಮಾಡುತ್ತಿದ್ದಾರೆ ಎಂದು ಸರ್ಕಾರಿ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಫೋಟೋಗಳು ತಿಳಿಸಿವೆ.
ಪ್ರತಿವರ್ಷ ಚೀನಾದ ಹೆಚ್ಚಿನ ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಅರೆ-ಉಷ್ಣವಲಯದ ದಕ್ಷಿಣದಲ್ಲಿ ಋತುಮಾನದ ಪ್ರವಾಹ ಎದುರಾಗುತ್ತದೆ. ಆದರೆ ಈ ವರ್ಷ ಕೆಲವು ಉತ್ತರ ಪ್ರದೇಶಗಳಲ್ಲಿ 50 ವರ್ಷಗಳಲ್ಲೇ ಅತ್ಯಂತ ಭೀಕರ ಪ್ರವಾಹ ಕಂಡುಬಂದಿದೆ ಎನ್ನಲಾಗಿದೆ.