ಕಾಸರಗೋಡು: ಜಿಲ್ಲಾದ್ಯಂತ ಬಿರುಸಿನ ಮಳೆ ಶನಿವಾರವೂ ಮುಂದುವರಿದಿದೆ. ಜಿಲ್ಲೆಯ ಈಸ್ಟ್ ಎಳೇರಿ ಕಡುಮನಿ ನಿವಾಸಿ ನಾರಾಯಣನ್(45)ನೀರಿನಲ್ಲಿ ಕೊಚ್ಚಿಹೋಗಿದ್ದು, ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಕೊಡಗಿನಲ್ಲಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕರಾಗಿದ್ದ ಇವರು ಅಲೆಟ್ಟಿ ಕೂರ್ನಡ್ಕದಲ್ಲಿ ತೊರೆಯೊಂದನ್ನು ಅಡ್ಡದಾಟುವ ಮಧ್ಯೆ ನೀರಿನ ಸೆಳೆತಕ್ಕೆ ಸಿಲುಕಿದ್ದರು.
ಜಿಲ್ಲೆಯಲ್ಲಿ ಸಮುದ್ರ ಕೊರೆತ ತೀವ್ರಗೊಳ್ಳುತ್ತಿದ್ದು, ಕರಾವಳಿ ಪ್ರದೇಶದ ನಿವಾಸಿಗಳಿUಶೀ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಮಂಜೇಶ್ವರಂ, ಉಪ್ಪಳ, ಮೊಗ್ರಾಲ್, ನೀಲೇಶ್ವರಂ ಮತ್ತು ಕರಿಯಂಕೋಡ್ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಅಪಾಯದ ಭೀತಿ ಎದುರಾಗಿದೆ. ಕರಾವಳಿ ವಾಸಿಗಳು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸಲಹೆ ನೀಡಿದ್ದಾರೆ.
ಮೊಗ್ರಲ್ ಕೊಪ್ಪಳದ ಅಳಿವೆಯಲ್ಲಿ ಈ ಪ್ರದೇಶದ ಜನತೆಗೆ ಅಪಾಯಕಾರಿಯಗಿ ಭಾರಿಪ್ರಮಾಣದಲ್ಲಿ ದಾಸ್ತನುಗೊಂಡಿದ್ದ ಮರಳನ್ನು ಊರಿನ ಜನತೆ ತೆರವುಗೊಳಿಸಿದರು. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ನಾಂಗಿ ಕಡಪ್ಪುರ, ಕೊಪ್ಪಳ, ಗಾಂಧಿನಗರ ಪ್ರದೆಸದ ಹಲವು ಮನೆಗಳಿಗೆ ನೆರೆನೀರು ನುಗ್ಗಿ ಅಪಾಯ ತಂದೊಡ್ಡಿತ್ತು. ಸಿ.ಕೆ ಅಬೂಬಕ್ಕರ್, ಸಿ.ಎಚ್. ಸಿದ್ದಿಕ್, ಅಶ್ರಫ್, ಅಬ್ಬಾಸ ಸಿ.ಕೆ ಮುಂತಾದವರು ಮರಲು ತೆರವು ಕಾರ್ಯಕ್ಕೆ ನೇತೃತ್ವ ನೀಡಿದರು.
ಕಾಸರಗೋಡು ಜಿಲ್ಲೆಯಲ್ಲಿ ಬಿರುಸಿನ ಮಳೆಗೆ 162.35ಹೆಕ್ಟರ್ ಕೃಷಿಭೂಮಿ ಹಾನಿಯಾಗಿದೆ. ಕೃಷಿ ಹಾನಿಯಿಂದ 2.70ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ. ಸುಮಾರು 67ಹೆಕ್ಟರ್ ಪ್ರದೇಶದ 11ಸಾವಿರಕ್ಕೂ ಹೆಚ್ಷಚು ಅಡಕೆ ಮರಗಳು ಹಾನಿಗೀಡಾಗಿದೆ. ಜತೆಗೆ ತೆಂಗು, ರಬ್ಬರ್, ಬಾಳೆ ಗಿಡಗಳಿಗೂ ಹಾನಿಯುಂಟಾಗಿದೆ.
ಮೊಗ್ರಾಲ್ ಕೊಪ್ಪಳದ ಅಳಿವೆಯಲ್ಲಿ ದಾಸ್ತಾನುಗೊಂಡಿದ್ದ ಮರಳನ್ನು ಯುವಕರ ತಂಡವೊಂದು ತೆರವುಗೊಳಿಸುವ ಮೂಲಕ ಮಾದರಿಯಾದರು.