HEALTH TIPS

ಎರಾಸ್ಮಸ್ ಮುಂಡಸ್: ಭಾರತದ 174 ವಿದ್ಯಾರ್ಥಿಗಳು ಆಯ್ಕೆ

                ವದೆಹಲಿ (PTI): 2023-24ನೇ ಸಾಲಿನಲ್ಲಿ ಆರಂಭವಾಗುವ ಪದವಿ ಕೋರ್ಸ್‌ಗಳಿಗೆ ನೀಡುವ ಪ್ರತಿಷ್ಠಿತ ಎರಾಸ್ಮಸ್ ಮುಂಡಸ್ ವಿದ್ಯಾರ್ಥಿ ವೇತನಕ್ಕೆ ಭಾರತದ 174 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

            ಆಯ್ಕೆಯಾದವರಲ್ಲಿ ಶೇ 50ರಷ್ಟು ವಿದ್ಯಾರ್ಥಿನಿಯರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಐರೋಪ್ಯ ಒಕ್ಕೂಟವು ಈ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಯೂರೋಪ್‌ ದೇಶಗಳ ಕನಿಷ್ಠ ಎರಡು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಬಹುದಾಗಿದೆ.

                  ಐರೋಪ್ಯ ಒಕ್ಕೂಟದ ಪ್ರತಿನಿಧಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಆಯ್ಕೆ ನಡೆದಿದೆ. 2022ರಲ್ಲಿ ಭಾರತದ 161 ಮಂದಿ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದರು.

                   ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ದೆಹಲಿ ಹಾಗೂ ಕೇರಳದ ವಿದ್ಯಾರ್ಥಿಗಳು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries