ಪತ್ತನಂತಿಟ್ಟ: ಕರ್ಕಟಕ ಮಾಸ ಪೂಜೆಗಳಿಗಾಗಿ ಶಬರಿಮಲೆ ಬಾಗಿಲು ಜುಲೈ 16ರ ಭಾನುವಾರ ತೆರೆಯಲಾಗುವುದು. ಸಂಜೆ 5ಕ್ಕೆ ತಂತ್ರಿ ಕಂಠಾರರ್ ರಾಜೀವರ ನೇತೃತ್ವದಲ್ಲಿ ಮೇಲ್ಶಾಂತಿ ಕೆ.ಜಯರಾಮನ್ ನಂಬೂದಿರಿ ದೀಪ ಬೆಳಗಿಸುವರು.
ಜುಲೈ 17ರ ಸೋಮವಾರದಿಂದ ದೇವಸ್ಥಾನದಲ್ಲಿ ಕÀರ್ಕಟಕ ಮಾಸದ ಪೂಜೆಗಳು ಆರಂಭವಾಗಲಿವೆ. ಸೋಮವಾರ ಪಂಪಾ ನದೀ ತೀರದಲ್ಲಿ ಪಿತೃತರ್ಪಣ ಸೌಲಭ್ಯ ಕಲ್ಪಿಸಲಾಗಿದೆ.
ಭಾನುವಾರ ಸನ್ನಿಧಿ ಬಾಗಿಲು ತೆರೆಯಲಾಗುವುದು ಮತ್ತು ದೇಗುಲದಲ್ಲಿ ದೀಪಗಳನ್ನು ಬೆಳಗಿಸಲಾಗುವುದು. ಬಳಿಕ ಗಣೇಶ ಮತ್ತು ನಾಗದೇವರ ದೇವಾಲಯಗಳನ್ನು ತೆರೆದು ದೀಪಗಳನ್ನು ಬೆಳಗಿಸಲಾಗುತ್ತದೆ. ಈ ವೇಳೆ ಮೇಲ್ಶಾಂತಿ ಮಾಳಿಗಪ್ಪುರ ದೇವಾಲಯದ ಬಾಗಿಲು ತೆರೆದು ದೀಪ ಬೆಳಗಿಸಲಾಗುವುದು. ನಂತರ ಭಕ್ತರು ಹದಿನೆಂಟನೇ ಮೆಟ್ಟಿಲು ಹತ್ತುತ್ತಾರೆ. ಪ್ರಾರಂಭದ ದಿನ ಇಲ್ಲಿ ಯಾವುದೇ ವಿಶೇಷ ಪೂಜೆಗಳಿರುವುದಿಲ್ಲ. ರಾತ್ರಿ 10 ಗಂಟೆಗೆ ಬಾಗಿಲು ಮುಚ್ಚಲಾಗುವುದು.
ಕರ್ಕಟಕ 1ನೇ ಸೋಮವಾರ ಮಾಸ ಪೂಜೆಗಳು ಬೆಳಗ್ಗೆ 5.30ಕ್ಕೆ ಆರಂಭವಾಗಲಿವೆ. ನಿರ್ಮಾಲ್ಯ ಮತ್ತು ಅಭಿಷೇಕದ ನಂತರ 5.30ಕ್ಕೆ ಮಹಾಗಣಪತಿ ಹೋಮ ನಡೆಯಲಿದೆ. ನಂತರ ತುಪ್ಪದ ಅಭಿಷೇಕ, 7.30ಕ್ಕೆ ಉಷಪೂಜೆ, ಮಧ್ಯಾಹ್ನ 12.30ಕ್ಕೆ ಮಧ್ಯಾಹ್ನ ಪೂಜೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಮುಚ್ಚಲಾಗುತ್ತದೆ. ಸಂಜೆ 5 ಗಂಟೆಗೆ ಮತ್ತೆ ತೆರೆಯಲಾಗುತ್ತದೆ.
ಕರ್ಕಟಕ ಪೂಜೆಗೆ ಸನ್ನಿಧಾನಕ್ಕೆ ಆಗಮಿಸುವ ಭಕ್ತರಿಗೆ ಮುಂಗಡವಾಗಿ ವರ್ಚುವಲ್ ಕ್ಯೂ ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ನಿಲಯ್ಕಲ್, ಪಂಬಾ ಮತ್ತು ಗಣಪತಿ ಕೋವಿಲ್‍ನಲ್ಲಿಯೂ ಸ್ಪಾಟ್ ಬುಕಿಂಗ್ ಸೌಲಭ್ಯವನ್ನು ಸ್ಥಾಪಿಸಲಾಗಿದೆ. ಐದು ದಿನಗಳ ಪೂಜೆಯ ನಂತರ ಶುಕ್ರವಾರ ಬಾಗಿಲು ಮುಚ್ಚಲಾಗುವುದು. ಕರ್ಕಟಕ ಅಮಾವಾಸ್ಯೆಯ ಪ್ರಯುಕ್ತ ಪಂಬಾದಲ್ಲಿ ಪಿತೃತರ್ಪಣ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಬೆಳಗ್ಗೆಯಿಂದ ಸಮಾರಂಭ ಆರಂಭವಾಗಲಿದೆ. ಪಂಬಾದ ತ್ರಿವೇಣಿ ಸಂಗಮದಲ್ಲಿ ಬಲಿತರ್ಪಣ ನಡೆಯಲಿದೆ.
ಕರ್ಕಟಕ ಪೂಜೆಯ ಸಂದರ್ಭದಲ್ಲಿ ಶಬರಿಮಲೆಗೆ ಕೆಎಸ್‍ಆರ್‍ಟಿಸಿ ವಿಶೇಷ ಬಸ್ ಸೇವೆಗಳನ್ನು ನಡೆಸಲಿದೆ. ಭಕ್ತರ ಅನುಕೂಲಕ್ಕೆ ತಕ್ಕಂತೆ ಪಂಬಾಗೆ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಒಂದು ವಾರ ಮುಂಚಿತವಾಗಿಯೇ ಕಲ್ಪಿಸಲಾಗಿದೆ. ತಿರುವನಂತಪುರಂ, ಕೊಟ್ಟಾರಕ್ಕರ, ಪುನಲೂರು ಮತ್ತು ಚೆಂಗನ್ನೂರಿನಿಂದ ವಿಶೇಷ ಬಸ್ ಸೇವೆಗಳನ್ನು ಏರ್ಪಡಿಸಲಾಗಿದೆ. ಸ್ಟ್ಯಾಂಡ್-ಬೈ ಪಂಪಾ ಚೈನ್ ಸೇವೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ತಿರುವನಂತಪುರಂ ಸೆಂಟ್ರಲ್ ಡಿಪೆÇೀದಿಂದ ವಿಶೇಷ ಬಸ್‍ಗಳು ಮತ್ತು ಮುಂಗಡ ಬುಕಿಂಗ್ ಸೌಲಭ್ಯವನ್ನು ಈಗಾಗಲೇ ಪರಿಚಯಿಸಲಾಗಿದೆ.