ಯೋಗ್ಯಕರ್ತ: ಇಂಡೊನೇಷ್ಯಾದ ಪ್ರಮುಖ ದ್ವೀಪವಾದ ಜಾವಾ ಬಳಿ ಸಮುದ್ರದಾಳದಲ್ಲಿ 5.8ರಷ್ಟು ತೀವ್ರತೆಯ ಭೂಕಂಪ ಶುಕ್ರವಾರ ಸಂಭವಿಸಿದೆ.
ಯೋಗ್ಯಕರ್ತ: ಇಂಡೊನೇಷ್ಯಾದ ಪ್ರಮುಖ ದ್ವೀಪವಾದ ಜಾವಾ ಬಳಿ ಸಮುದ್ರದಾಳದಲ್ಲಿ 5.8ರಷ್ಟು ತೀವ್ರತೆಯ ಭೂಕಂಪ ಶುಕ್ರವಾರ ಸಂಭವಿಸಿದೆ.
ಭೂಕಂಪದ ಪರಿಣಾಮ ಹಲವು ಕಟ್ಟಡಗಳು ಹಾನಿಗೀಡಾಗಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ ಎಂದು ಅಲ್ಲಿಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಮೃತಪಟ್ಟವರು ಬಂತುಲ್ ನಿವಾಸಿಯಾಗಿದ್ದಾರೆ. ಯೋಗ್ಯಕರ್ತ ಮತ್ತು ಅದರ ನೆರೆಯ ಪ್ರಾಂತ್ಯಗಳಾದ ಕೇಂದ್ರ ಜಾವಾ ಮತ್ತು ಪೂರ್ವ ಜಾವಾದಲ್ಲಿಯ ಶಾಲೆಗಳು, ಆರೋಗ್ಯ ಕೇಂದ್ರಗಳು, ಪ್ರಾರ್ಥನಾ ಮಂದಿರಗಳು, ಮನೆಗಳು ಸೇರಿ ಸುಮಾರು 93 ಕಟ್ಟಡಗಳು ಹಾನಿಗೀಡಾಗಿವೆ ಎಂದು ವಕ್ತಾರರು ತಿಳಿಸಿದ್ದಾರೆ.
ಸುನಾಮಿಯ ಅಪಾಯವಿಲ್ಲ ಎಂದು ಇಂಡೊನೇಷ್ಯಾದ ಹವಾಮಾನ, ವಾಯುಗುಣ ಮತ್ತು ಭೂಭೌತಿಕ ಸಂಸ್ಥೆ ಹೇಳಿದೆ.