ತಿರುವನಂತಪುರಂ: ಟೈಪ್ 1 ಡಯಾಬಿಟಿಸ್ ಸೇರಿದಂತೆ ಅಸ್ವಸ್ಥರಾಗಿರುವ ರಾಜ್ಯದ ಎಲ್ಲ ಮಕ್ಕಳಿಗೆ ಅವರ ಮನೆ ಸಮೀಪದ ಶಾಲೆಗಳಲ್ಲಿ ಏಕ ಗವಾಕ್ಷಿ ವ್ಯವಸ್ಥೆ ಮೂಲಕ ಪ್ಲಸ್ 2 ವರೆಗೆ ಶಿಕ್ಷಣ ನೀಡಬೇಕು ಎಂದು ಮಕ್ಕಳ ಹಕ್ಕು ಆಯೋಗ ಆದೇಶಿಸಿದೆ.
ಎಲ್ಲಾ ಶಾಲೆಗಳಲ್ಲಿ ಅನಾರೋಗ್ಯದ ಮಕ್ಕಳನ್ನು ನೋಡಿಕೊಳ್ಳಲು ಕನಿಷ್ಠ ಇಬ್ಬರು ಶಿಕ್ಷಕರಿಗೆ ತರಬೇತಿ ನೀಡಬೇಕು ಎಂದು ಆದೇಶಿಸಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳ ಕುಟುಂಬ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಮೂಲಕ ಶಿಕ್ಷಕರಿಗೆ ತರಬೇತಿ ನೀಡಬಹುದು ಎಂದು ಆಯೋಗವು ಉನ್ನತ ಶಿಕ್ಷಣ, ಸಾರ್ವಜನಿಕ ಶಿಕ್ಷಣ, ಸಾಮಾಜಿಕ ನ್ಯಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳು ಮತ್ತು ಸಾರ್ವಜನಿಕ ಶಿಕ್ಷಣ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖಾ ನಿರ್ದೇಶಕರುಗಳಿಗೆ ನಿರ್ದೇಶನ ನೀಡಿದೆ. ಶಿಶು ಅಭಿವೃದ್ಧಿ ಇಲಾಖೆಗಳು ತುರ್ತು ಸಂದರ್ಭಗಳಲ್ಲಿ ಅನಾರೋಗ್ಯದ ಮಕ್ಕಳಿಗಾಗಿ ಅನಾರೋಗ್ಯ ಕೊಠಡಿಗಳನ್ನು ಸಿದ್ಧಪಡಿಸುವುದು, ಲಸಿಕೆಗಳನ್ನು ತೆಗೆದುಕೊಳ್ಳಲು ಕ್ಮ ಕೈಗೊಳ್ಳುವುದು ಮತ್ತು ಎಲ್ಲಾ ಶಾಲೆಗಳಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಆರೋಗ್ಯ ಕಡತಗಳನ್ನು ನಿರ್ವಹಿಸುವುದು ಅಗತ್ಯವೆಂದು ವರದಿ ಹೇಳಿದೆ.
ಆಯೋಗದ ಅಧ್ಯಕ್ಷ ಕೆ. ವಿ. ಮನೋಜ್ ಕುಮಾರ್, ಸದಸ್ಯರಾದ ಶ್ಯಾಮಲಾದೇವಿ ಪಿ.ಪಿ., ಬಬಿತಾ ಬಿ. ಅವರನ್ನೊಳಗೊಂಡ ಪೂರ್ಣ ಪೀಠ ಈ ಆದೇಶ ಹೊರಡಿಸಿದೆ. ಕ್ರಮ ಕೈಗೊಂಡಿರುವ ವರದಿಯನ್ನು 45 ದಿನಗಳಲ್ಲಿ ಸಲ್ಲಿಸುವಂತೆಯೂ ಆಯೋಗ ಸೂಚಿಸಿದೆ.