ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪ್ರಕಟಿಸಿರುವ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಯುಇಟಿ-ಯುಜಿ) ಹಲವು ತಾತ್ಕಾಲಿಕ ಕೀ ಉತ್ತರಗಳು ತಪ್ಪಾಗಿವೆ ಎಂದು ವಿದ್ಯಾರ್ಥಿಗಳು ಹಾಗೂ ಕೆಲ ಶಿಕ್ಷಕರು ದೂರಿದ್ದಾರೆ.
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪ್ರಕಟಿಸಿರುವ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಯುಇಟಿ-ಯುಜಿ) ಹಲವು ತಾತ್ಕಾಲಿಕ ಕೀ ಉತ್ತರಗಳು ತಪ್ಪಾಗಿವೆ ಎಂದು ವಿದ್ಯಾರ್ಥಿಗಳು ಹಾಗೂ ಕೆಲ ಶಿಕ್ಷಕರು ದೂರಿದ್ದಾರೆ.
'ತಪ್ಪು ಉತ್ತರಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸುವವರು, ಪ್ರತಿ ಪ್ರಶ್ನೆಗೆ ₹ 200 ಶುಲ್ಕ ಪಾವತಿಸಬೇಕು ಎಂದು ಹೇಳುವ ಮೂಲಕ ಎನ್‌ಟಿಎ ಲೂಟಿ ಮಾಡುತ್ತಿದೆ' ಎಂದು ಆರೋಪಿಸಿದ್ದಾರೆ.
'ಮುದ್ರಣ ದೋಷವಾಗಿರಬಹುದು. ಯಾವುದೇ ಶುಲ್ಕ ಪಾವತಿಸದೆ ಎನ್‌ಟಿಎಗೆ ನೇರವಾಗಿ ಇ- ಮೇಲ್ ಆಕ್ಷೇಪಣೆ ಸಲ್ಲಿಸಬಹುದು. ಆಕ್ಷೇಪಣೆ ಸರಿ ಎನಿಸಿದಲ್ಲಿ, ಪರಿಗಣಿಸಲಾಗುವುದು. ಎರಡು ದಿನದಲ್ಲಿ ಸರಿಪಡಿಸಿದ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಲಾಗುವುದು' ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದ ಅಧ್ಯಕ್ಷ ಜಗದೀಶ್ ಕುಮಾರ್ ತಿಳಿಸಿದ್ದಾರೆ.
ಜೂನ್ 29ರಂದು ಎನ್‌ಟಿಎ ಕೀ ಉತ್ತರ ಪ್ರಕಟಿಸಿತ್ತು. ಜುಲೈ 1ರಂದು ರಾತ್ರಿ 11.30ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು. ಪ್ರಶ್ನೆಯೊಂದಕ್ಕೆ ₹ 200 ಶುಲ್ಕ ನಿಗದಿಪಡಿಸಿಕ್ಕೆ ವಿದ್ಯಾರ್ಥಿ ಸಮೂಹದಿಂದ ಭಾರಿ ಅಸಮಾಧಾನ ವ್ಯಕ್ತವಾಗಿದೆ.