ಕೊಚ್ಚಿ: ಕೊಲ್ಲಿಯಿಂದ ಕೇರಳಕ್ಕೆ 20,000 ಕೋಟಿ ರೂ.ಗಳನ್ನು ಅಕ್ರಮವಾಗಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಟೆಡ್ ಅಕೌಂಟೆಂಟ್ ಒಬ್ಬನನ್ನು ಬಂಧಿಸಲಾಗಿದೆ.
ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಮ್ಯಾಥ್ಯೂ ಜಾರ್ಜ್ ಅವರನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದೆ. . ಅವರೊಂದಿಗಿದ್ದ ಅಭಿಷೇಕ್ ಜಾರ್ಜ್ ಅವರನ್ನೂ ವಶಕ್ಕೆ ಪಡೆಯಲಾಗಿದೆ. ನಿನ್ನೆ ರಾತ್ರಿ ಎಮಿರೇಟ್ಸ್ ವಿಮಾನದಲ್ಲಿ ದುಬೈಯಿಂದ ಆಗಮಿಸಿದ್ದ ಅವರನ್ನು ಬಂಧಿಸಲಾಗಿದೆ.
ಚಿತ್ರೋದ್ಯಮ ಮತ್ತು ಚಿನ್ನ ಸೇರಿದಂತೆ ವ್ಯಾಪಾರದ ನೆಪದಲ್ಲಿ ಗಲ್ಫ್‍ನಿಂದ ಕೇರಳಕ್ಕೆ 20,000 ಕೋಟಿಗೂ ಹೆಚ್ಚು ಹಣವನ್ನು ಕಳ್ಳಸಾಗಣೆ ಮಾಡಿರುವುದನ್ನು ಇಡಿ ಪತ್ತೆ ಹಚ್ಚಿತ್ತು. ಇದಕ್ಕೆ ಸಂಬಂಧಿಸಿದಂತೆ, ಪ್ರಮುಖ ಚಿನ್ನದ ಅಂಗಡಿಗಳು ಸೇರಿದಂತೆ ಹಲವು ಸಂಸ್ಥೆಗಳ ಮೇಲೆ ದಾಳಿ ನಡೆಸಲಾಯಿತು. ಅದರ ಮುಂದುವರಿದ ಭಾಗವೇ ನಿನ್ನ ನಡೆದ ಬಂಧನ ಎನ್ನಲಾಗಿದೆ. ಸದ್ಯದಲ್ಲೇ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಜೋಡಿಗಳೂ ಸಿಕ್ಕಿ ಬೀಳುವ ಸೂಚನೆ ಇದೆ.