HEALTH TIPS

2019ರಿಂದ 2021ರವರೆಗೆ 13.13 ಲಕ್ಷ ಬಾಲಕಿಯರು, ಮಹಿಳೆಯರು ನಾಪತ್ತೆ

              ವದೆಹಲಿ: 2019ರಿಂದ 2021ರವರೆಗಿನ ಮೂರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ 13.13ಲಕ್ಷಕ್ಕೂ ಹೆಚ್ಚು ಬಾಲಕಿಯರು ಮತ್ತು ಮಹಿಳೆಯರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರಲ್ಲಿ ಬಹುತೇಕರು ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದವರು.

             ಕೇಂದ್ರ ಗೃಹ ಸಚಿವಾಲಯವು ಕಳೆದ ವಾರ ಸಂಸತ್ತಿಗೆ ಒದಗಿಸಿದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ 18 ವರ್ಷಕ್ಕೂ ಮೇಲ್ಪಟ್ಟ 10,61,648 ಮಹಿಳೆಯರು ಹಾಗೂ 2,51,430 ಅಪ್ರಾಪ್ತ ವಯಸ್ಸಿನ ಬಾಲಕಿಯರು ನಾಪತ್ತೆಯಾಗಿದ್ದಾರೆ.

             ಈ ಅಂಕಿ ಅಂಶಗಳನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಒದಗಿಸಿದೆ.

              ಮಹಿಳೆಯರ ಸುರಕ್ಷತೆಗಾಗಿ ಲೈಂಗಿಕ ಅಪರಾಧಗಳ ಪರಿಣಾಮಕಾರಿ ತಡೆಗಟ್ಟುವಿಕೆಗಾಗಿ ಅಪರಾಧ (ಕ್ರಿಮಿನಲ್) ಕಾನೂನು (ತಿದ್ದುಪಡಿ) ಕಾಯ್ದೆ 2013 ಸೇರಿದಂತೆ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರವು ಸಂಸತ್ತಿಗೆ ಮಾಹಿತಿ ನೀಡಿದೆ.

              ಅಪರಾಧ ಕಾನೂನು (ತಿದ್ದುಪಡಿ) 2018 ಕಾಯ್ದೆಯು 12 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಕ್ಕೆ ಮರಣದಂಡನೆಯನ್ನು ಒಳಗೊಂಡಂತೆ ಇತರ ಕಠಿಣ ದಂಡನೆಗಳ ನಿಬಂಧನೆಗಳನ್ನೂ ಒಳಗೊಂಡಿದೆ. ಅಷ್ಟೇ ಅಲ್ಲ, ಅತ್ಯಾಚಾರ ಪ್ರಕರಣಗಳ ತನಿಖೆ ಹಾಗೂ ಚಾರ್ಜ್‌ಶೀಟ್ ಅನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು ಹಾಗೂ ವಿಚಾರಣೆಯನ್ನು ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂಬುದನ್ನೂ ಈ ಕಾಯ್ದೆಯು ಕಡ್ಡಾಯಗೊಳಿಸಿದೆ.

             ಸಂಕಷ್ಟದಲ್ಲಿರುವ ಹೆಣ್ಣುಮಕ್ಕಳಿಗೆ ತುರ್ತು ಪ್ರತಿಕ್ರಿಯೆಯಾಗಿ ಬೆಂಬಲಿಸುವ ವ್ಯವಸ್ಥೆಯನ್ನು ದೇಶದಾದ್ಯಂತ ಸರ್ಕಾರವು ಪ್ರಾರಂಭಿಸಿದೆ. ಎಲ್ಲಾ ತುರ್ತು ಪರಿಸ್ಥಿತಿಗಳಿಗೆ ಅಂತರರಾಷ್ಟ್ರೀಯವಾಗಿ ಗುರುತಾಗಿರುವ ಸಂಖ್ಯೆ 112 ಕರೆಯನ್ನು ರೂಪಿಸಿದ್ದು, ಈ ಸಂಖ್ಯೆಗೆ ಕರೆ ಮಾಡಿದಾಕ್ಷಣ ಕಂಪ್ಯೂಟರ್‌ ನೆರವಿನ ಮೂಲಕ ಕರೆ ಬಂದ ಸ್ಥಳವನ್ನು ಗುರುತಿಸಿ, ತಕ್ಷಣವೇ ಮಹಿಳೆಗೆ ನೆರವು ಒದಗಿಸಲಾಗುವುದು.

'ಸೇಫ್ ಸಿಟಿ' ಯೋಜನೆಯನ್ನು ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತ, ಲಖನೌ ಮತ್ತು ಮುಂಬೈ ಎಂಟು ನಗರಗಳಲ್ಲಿ ಮೊದಲ ಹಂತದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಸಂದೇಶ, ವಿಡಿಯೊ ರವಾನಿಸುವವರನ್ನು ಶಿಕ್ಷಿಸುವ ಸಲುವಾಗಿ 2018ರ ಸೆ. 20ರಂದು ಗೃಹ ಸಚಿವಾಲಯವು ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ಅನ್ನೂ ರೂಪಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries