ಕಾಸರಗೋಡು: ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಸೆಪ್ಟೆಂಬರ್ 11 ರಂದು ಬೇಕಲದ ಲಲಿತ್ ರೆಸಾರ್ಟ್‍ನಲ್ಲಿ ಆಯೋಜಿಸಲಾಗಿರುವ ಹೂಡಿಕೆದಾರ ಸಂಗಮಂ 2023 ರ ಯಶಸ್ವಿಗಾಗಿ ಮಾಧ್ಯಮ ಸಮಿತಿ ಸಭೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚೇಂಬರ್‍ನಲ್ಲಿ ನಡೆಯಿತು. ಸಂಗಮದ ಪ್ರಚಾರ ಕಾರ್ಯಗಳಿಗಾಗಿ ಆನ್‍ಲೈನ್ ಮತ್ತು ಆಫ್‍ಲೈನ್ ಚಟುವಟಿಕೆ ನಡೆಸಲು ತೀರ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್, ಮಾಧ್ಯಮ ಸಮಿತಿ ಸದಸ್ಯರಾದ ಬಿ.ಕೆ.ಪ್ರಜೀಶ್, ಕೆ.ಎಂ.ರಂಜಿತ್, ಪಿ.ಎ.ಇಬ್ರಾಹಿಂ ಸಾಬೀರ್, ಎಂ.ಸೌಮಿನಿ, ಹರಿತಾ ಸುನೀಲ್, ಎಐಒ ಎ.ಪಿ.ದಿಲ್ನಾ ಮತ್ತಿತರರು ಭಾಗವಹಿಸಿದ್ದರು.