ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಮ್ಮ 20ನೇ ಚಾತುರ್ಮಾಸ್ಯ ವ್ರತಸಂಕಲ್ಪ ನಿನ್ನೆ ಗುರುಪೂರ್ಣಿಮೆಯಂದು ಕೊಂಡೆವೂರು ಶ್ರೀಮಠದಲ್ಲಿ ಆರಂಭಗೊಂಡಿತು. ಬೆಳಿಗ್ಗೆ 8.30ಕ್ಕೆ ಗಣಹೋಮ, 9.30ಕ್ಕೆ ಶ್ರೀ ನಿತ್ಯಾನಂದ ಗುರುದೇವರಿಗೆ ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, 10.30ಕ್ಕೆ ವ್ಯಾಸಪೂಜೆ ಆರಂಭವಾಗಿ 12.00ಕ್ಕೆ ಮಂಗಳಾರತಿ, 12.30ಕ್ಕೆ ಮಹಾಪೂಜೆ ನಂತರ ಅನ್ನಪ್ರಸಾದ ನಡೆಯಿತು. ಸಂಜೆ 7.ಕ್ಕೆ “ಶ್ರೀ ಗುರುಪಾದುಕಾ ಪೂಜೆ”, ಭಜನೆ ನಂತರ ಪರಮಪೂಜ್ಯರು”ಸತ್ಸಂಗ” ನಡೆಸಿ ಅನುಗ್ರಹ ಮಂತ್ರಾಕ್ಷತೆ ನೆರವೇರಿತು. .
ದಿ.29.09.2023 ಶುಕ್ರವಾರದಂದು ಸಂಪನ್ನಗೊಳ್ಳಲಿರುವ ಚಾತುರ್ಮಾಸ್ಯದ ಈ ಸತ್ಸಂದರ್ಭದಲ್ಲಿ ವಿವಿಧ ಹೋಮ ಹವನಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತೀದಿನ ಸಂಜೆ 5.30ರಿಂದ 7.00ರ ವರೆಗೆ ವಿವಿಧ ಭಜನಾತಂಡಗಳಿಂದ ಭಜನಾಸೇವೆ ನಡೆಯಲಿದೆ. ಪ್ರತೀ ಭಾನುವಾರ ಸಂಜೆ 3.00 ರಿಂದ 5.00 ವರೆಗೆ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ, ಭಜನೆ ಹಾಗೂ ಸತ್ಸಂಗಗಳನ್ನು (ವಿವಿಧ ವಿದ್ವಾಂಸರ ಧಾರ್ಮಿಕ ಪ್ರವಚನಗಳು)ಆಯೋಜಿಸಿದೆ. ಚಾತುರ್ಮಾಸ್ಯದ ಈ ಪುಣ್ಯಸಮಯದಲ್ಲಿ ಭಕ್ತಾದಿಗಳು ಶ್ರೀಮಠಕ್ಕೆ ಆಗಮಿಸಿ, ಶ್ರೀಗುರು ಕೃಪಾಶೀರ್ವಾದ ಪಡೆದು ಅನುಗ್ರಹೀತರಾಗಬೇಕಾಗಿ ಕೊಂಡೆವೂರು ಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.