ಇಂದೋರ್: ಇಲ್ಲಿ ಜುಲೈ 19ರಿಂದ ಮೂರು ದಿನಗಳ ಕಾಲ ನಡೆಯಲಿರುವ ಜಿ-20 ಸಭೆಯ ಸಿದ್ಧತೆಗಳನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಅವರು ಭಾನುವಾರ ಪರಿಶೀಲಿಸಿದರು.
ಇಂದೋರ್: ಇಲ್ಲಿ ಜುಲೈ 19ರಿಂದ ಮೂರು ದಿನಗಳ ಕಾಲ ನಡೆಯಲಿರುವ ಜಿ-20 ಸಭೆಯ ಸಿದ್ಧತೆಗಳನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಅವರು ಭಾನುವಾರ ಪರಿಶೀಲಿಸಿದರು.
ಮೊದಲ ಎರಡು ದಿನ ಉದ್ಯೋಗ ಕಾರ್ಯಕಾರಿ ಸಮಿತಿಯ ಸಭೆ, ಕೊನೆಯ ದಿನ ಜಿ-20 ದೇಶಗಳ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಐತಿಹಾಸಿಕ, ಸಾಂಸ್ಕೃತಿಕ ಪರಂಪರೆ ಮತ್ತು ಮಧ್ಯಪ್ರದೇಶದ ವನ್ಯಜೀವಿಗಳನ್ನು ಜಿ-20 ಗಣ್ಯರಿಗೆ ಪರಿಚಯಿಸಲು ಯಾದವ್ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯ ಬಳಿಕ ನಗರದ ಪ್ರಖ್ಯಾತ 56 ಅಂಗಡಿಗಳಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 29 ದೇಶಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಇಳಯರಾಜ ಟಿ. ಮಾಹಿತಿ ನೀಡಿದರು.