ನವದೆಹಲಿ: 'ಬಾಲ್ ಸ್ವರಾಜ್' ವೆಬ್ ಪೋರ್ಟಲ್ ನೆರವಿನೊಂದಿಗೆ ದೇಶದಾದ್ಯಂತ ಸುಮಾರು 23,000 ಬೀದಿ ಮಕ್ಕಳನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.
ನವದೆಹಲಿ: 'ಬಾಲ್ ಸ್ವರಾಜ್' ವೆಬ್ ಪೋರ್ಟಲ್ ನೆರವಿನೊಂದಿಗೆ ದೇಶದಾದ್ಯಂತ ಸುಮಾರು 23,000 ಬೀದಿ ಮಕ್ಕಳನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.
ಈ ವೆಬ್‌ಸೈಟ್‌ನಲ್ಲಿ ಅಂಥ ಮಕ್ಕಳ ಮಾಹಿತಿಯನ್ನು ಅಪ್ಲೋಡ್ ಮಾಡಿ ಪುನರ್ವಸತಿಗೆ ಕಲ್ಪಿಸುವ ಉದ್ದೇಶದಿಂದ ಹುಡುಕಾಟ ನಡೆಸಲಾಗುತ್ತದೆ.
23,000 ಮಕ್ಕಳ ಪೈಕಿ ಶೇ 53ರಷ್ಟು ಮಕ್ಕಳು ಕುಟುಂಬದೊಂದಿಗೆ ಬೀದಿಗಳಲ್ಲಿ ವಾಸಿಸುತ್ತಿದ್ದರು, ಶೇ 43ರಷ್ಟು ಮಕ್ಕಳು ಹಗಲು ಬೀದಿ ಸುತ್ತುತ್ತ ರಾತ್ರಿ ಮನೆಗೆ ತೆರಳುತ್ತಿದ್ದರು ಮತ್ತು ಶೇ 4ರಷ್ಟು ಮಕ್ಕಳು ಏಕಾಂಗಿಯಾಗಿ ಬೀದಿಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿಸಿದರು.
'ಇಂಥ ಮಕ್ಕಳನ್ನು ಮನೆಯಿಂದ ಓಡಿಹೋದ ಮಕ್ಕಳು, ಕುಟುಂಬದಿಂದ ದೂರಾದವರು ಮತ್ತು ಏಕಾಂಗಿಯಾಗಿ ಬೀದಿಗಳಲ್ಲಿ ವಾಸಿಸುತ್ತಿರುವವರು ಎಂಬ ಮೂರು ವಿಭಾಗಗಳಾಗಿ ವರ್ಗೀಕರಿಸಲಾಗುತ್ತದೆ. ಕೊಳಗೇರಿಗಳಲ್ಲಿ ವಾಸಿಸುತ್ತಿರುವವರು ಮತ್ತು ಹಗಲು ಬೀದಿ ತಿರುಗುತ್ತ ರಾತ್ರಿ ಮನೆ ಸೇರುವ ಮಕ್ಕಳನ್ನೂ ಮೂರನೇ ವರ್ಗಕ್ಕೆ ಸೇರಿಸಲಾಗಿದೆ' ಎಂದು ತಿಳಿಸಿದರು.