ನವದೆಹಲಿ :ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ), ಎಲ್ಲಾ ರಾಜ್ಯಗಳ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆಗಳ (ಎಎನ್ಟಿಎಫ್) ಸಮನ್ವಯದಲ್ಲಿ ದೇಶದ ವಿವಿಧ ಭಾಗಗಳಲ್ಲಿ 2,400 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಿದೆ.
ನವದೆಹಲಿ :ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ), ಎಲ್ಲಾ ರಾಜ್ಯಗಳ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆಗಳ (ಎಎನ್ಟಿಎಫ್) ಸಮನ್ವಯದಲ್ಲಿ ದೇಶದ ವಿವಿಧ ಭಾಗಗಳಲ್ಲಿ 2,400 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡ್ರಗ್ಸ್ ನಾಶವನ್ನು ವರ್ಚುಲ್ ಆಗಿ ಮೇಲ್ವಿಚಾರಣೆ ಮಾಡಿದರು.
ಶಾ ಅವರು ಇಂದು ಹೊಸದಿಲ್ಲಿಯಲ್ಲಿ "ಡ್ರಗ್ಸ್ ಟ್ರಾಫಿಕಿಂಗ್ ಮತ್ತು ರಾಷ್ಟ್ರೀಯ ಭದ್ರತೆ" ಕುರಿತು ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಅಂದಾಜು 2,416 ಕೋಟಿ ರೂ. ಮೌಲ್ಯದ 1,44,000 ಕೆಜಿ ಡ್ರಗ್ಸ್ ಗಳು ನಾಶವಾಗಿವೆ.
ಎನ್ ಸಿಬಿ ಹೈದರಾಬಾದ್ ಘಟಕದಿಂದ ವಶಪಡಿಸಿಕೊಂಡ 6,590 ಕೆಜಿ, ಇಂದೋರ್ ಘಟಕದಿಂದ ವಶಪಡಿಸಿಕೊಂಡ 822 ಕೆಜಿ ಮತ್ತು ಜಮ್ಮು ಘಟಕದಿಂದ ವಶಪಡಿಸಿಕೊಂಡ ಡ್ರಗ್ಸ್ ಗಳು ಇದರಲ್ಲಿವೆ ಎಂದು ಗೃಹ ಸಚಿವಾಲಯ (ಎಂಎಚ್‌ಎ) ತಿಳಿಸಿದೆ.
ಎನ್ಸಿಬಿ ನಾಶಪಡಿಸಿದ ಡ್ರಗ್ಸ್ ಜೊತೆಗೆ ಅಸ್ಸಾಂನಲ್ಲಿ 1,486 ಕೆಜಿ, ಚಂಡೀಗಢದಲ್ಲಿ 229 ಕೆಜಿ, ಗೋವಾದಲ್ಲಿ 25 ಕೆಜಿ, ಗುಜರಾತ್ನಲ್ಲಿ 4,277 ಕೆಜಿ, ಹರ್ಯಾಣದಲ್ಲಿ 2,458 ಕೆಜಿ, ಜಮ್ಮು ಮತ್ತು ಕಾಶ್ಮೀರದಲ್ಲಿ 4,069 ಕೆಜಿ, ಮಧ್ಯಪ್ರದೇಶದಲ್ಲಿ 1,03,884 ಕೆಜಿ, ಮಹಾರಾಷ್ಟ್ರದಲ್ಲಿ159 ಕೆಜಿ, ತ್ರಿಪುರಾದಲ್ಲಿ 1,803 ಕೆಜಿ, ಉತ್ತರ ಪ್ರದೇಶದಲ್ಲಿ 4,049 ಕೆಜಿ. ಡ್ರಗ್ಸ್ ನಾಶಪಡಿಸಲಾಗಿದೆ.
ಜೂನ್ 1, 2022 ರಿಂದ ಜುಲೈ 15, 2023 ರವರೆಗೆ, NCB ಯ ಎಲ್ಲಾ ಪ್ರಾದೇಶಿಕ ಘಟಕಗಳು ಮತ್ತು ರಾಜ್ಯ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಗಳು ಅಂದಾಜು 9,580 ಕೋಟಿ ರೂ. ಮೌಲ್ಯದ ಅಂದಾಜು 8,76,554 ಕೆಜಿ ವಶಪಡಿಸಿಕೊಂಡ ಡ್ರಗ್ಗಳನ್ನು ನಾಶಪಡಿಸಿವೆ.