ಬದಿಯಡ್ಕ: ಗೋಸಾಡ ಶ್ರೀ ಮಹಿಷಮರ್ದಿನಿ ಕ್ಷೇತ್ರದಲ್ಲಿ ಆ. 25ರಂದು ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಲಿರುವುದು. ಶ್ರೀ ಮಹೀಷಮರ್ದಿನಿ ಮಾತೃ ಮಂಡಳಿ ಗೋಸಾಡ ಇವರ ನೇತೃತ್ವದಲ್ಲಿ ನಡೆಯಲಿರುವ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಬೆಳ್ಳೂರು ಶಾಲೆಯ ಶಿಕ್ಷಕಿ ಗೀತಾಂಜಲಿ ಭಟ್ ಬಿಡುಗಡೆಗೊಳಿಸಿದರು. ಮಾತೃ ಮಂಡಳಿಯ ಅಧ್ಯಕ್ಷೆ ಲಲಿತಾ ಗೋಸಾಡ ಅಧ್ಯಕ್ಷತೆ ವಹಿಸಿದ್ದರು. ಸೇವಾ ಸಮಿತಿಯ ಉಪಾಧ್ಯಕ್ಷರುಗಳಾದ ಪ್ರಭಾಕರ ರೈ ಮಠದ ಮೂಲೆ, ಪ್ರಸಾದ ಮಣಿಯಾಣಿ ಗೋಸಾಡ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಸೇವಾ ಸಮಿತಿ ಕಾರ್ಯದರ್ಶಿ ಸದಾಶಿವ ರೈ ಗೋಸಾಡ, ಸೇವಾ ಸಮಿತಿ ಕೋಶಾಧಿಕಾರಿ ಪರಮೇಶ್ವರ ಭಟ್ ಗೋಸಾಡ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನಳಿನಿ ಪರಪ್ಪೆ ಸ್ವಾಗತಿಸಿ ಮಾತೃ ಮಂಡಳಿಯ ಕೋಶಾಧಿಕಾರಿ ಜಯಂತಿ ಗೋಸಾಡ ವಂದಿಸಿದರು. ಸೇವಾ ಸಮಿತಿಯ ಸದಸ್ಯರು, ಭಜನಾ ಸಂಘದ ಸದಸ್ಯರು, ಮಾತೃ ಮಂಡಳಿಯ ಸದಸ್ಯರು ಹಾಗೂ ಊರ ಹತ್ತು ಸಮಸ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ವಿತರಿಸಲು ವಿವಿಧ ತಂಡಗಳನ್ನು ರೂಪೀಕರಿಸಿ ಆ ತಂಡಕ್ಕೆ ಜವಾಬ್ದಾರಿಯನ್ನು ನೀಡಲಾಯಿತು.