HEALTH TIPS

ನೌಕಾಪಡೆಗೆ 26 ರಫೇಲ್‌ ಖರೀದಿಗೆ ಅಸ್ತು: ಕೇಂದ್ರ ಸರ್ಕಾರ ಮಾಹಿತಿ

              ವದೆಹಲಿ: ಭಾರತೀಯ ನೌಕಾಪಡೆಗೆ ಹೊಸ ಪೀಳಿಗೆಯ 26 ರಫೇಲ್ ಜೆಟ್‌ಗಳ ಖರೀದಿಗೆ ಕೇಂದ್ರ ಸರ್ಕಾರವು ಅಧಿಕೃತವಾಗಿ ಮುದ್ರೆ ಒತ್ತಿದೆ ಎಂದು ಫ್ರಾನ್ಸ್‌ನ ಫೈಟರ್‌ ಜೆಟ್ ರಫೇಲ್‌ ತಯಾರಿಕಾ ಕಂಪನಿಯಾದ ಡಸಾಲ್ಟ್‌ ಏವಿಯೇಷನ್‌ ಶನಿವಾರ ದೃಢಪಡಿಸಿದೆ.

             ರಕ್ಷಣಾ ಸಚಿವಾಲಯವು ರಫೇಲ್‌ (ನೌಕಾಪಡೆ) ಜೆಟ್‌ಗಳ ಖರೀದಿಗೆ ಗುರುವಾರ ಒಪ್ಪಿಗೆ ನೀಡಿದೆ.

ಈಗಾಗಲೇ, ಭಾರತೀಯ ವಾಯುಪಡೆಯಲ್ಲಿ 36 ರಫೇಲ್‌ ಜೆಟ್‌ಗಳಿವೆ. ಈಗ ನೌಕಾಪಡೆಗೆ ಹೊಸದಾಗಿ 26 ಜೆಟ್‌ಗಳು ಸೇರ್ಪಡೆಯಾಗುತ್ತಿದ್ದು, ರಕ್ಷಣಾ ಪಡೆಯ ಬತ್ತಳಿಕೆಯಲ್ಲಿರುವ ರಫೇಲ್‌ಗಳ ಸಂಖ್ಯೆ 62ಕ್ಕೆ ತಲುಪಲಿದೆ. ಆ ಮೂಲಕ ಭಾರತವು ವಾಯುಪಡೆ ಮತ್ತು ನೌಕಾಪಡೆ ಎರಡಕ್ಕೂ ಫ್ರಾನ್ಸ್‌ನಿಂದ ಜೆಟ್‌ಗಳನ್ನು ಖರೀದಿಸಿದ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

                  ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್‌ ಜೊತೆಗೂಡಿ ಬಿಡುಗಡೆ ಮಾಡಿದ ಪತ್ರದಲ್ಲಿ ಎಷ್ಟು ಜೆಟ್‌ಗಳನ್ನು ಖರೀದಿಸಲಾಗುತ್ತದೆ ಎಂಬ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಈಗ ಅಧಿಕೃತವಾಗಿ ಬಹಿರಂಗಗೊಂಡಿದೆ.

             'ಭಾರತೀಯ ನೌಕಾ ನೆಲೆಯಲ್ಲಿ ಈ ಜೆಟ್‌ಗಳ ಯಶಸ್ವಿ ಹಾರಾಟ, ಪ್ರದರ್ಶನದ ಬಳಿಕ ಭಾರತವು ಇವುಗಳನ್ನು ಖರೀದಿಸುತ್ತಿದೆ. ಅಲ್ಲಿನ ಯುದ್ಧ ವಿಮಾನಗಳ ವಾಹಕಗಳಿಗೆ ಅನುಗುಣವಾಗಿ ಇವುಗಳನ್ನು ತಯಾರಿಸಲಾಗಿದೆ' ಎಂದು ಡಸಾಲ್ಟ್‌ ಕಂಪನಿ ತಿಳಿಸಿದೆ.

                'ಭಾರತದ ರಕ್ಷಣಾ ಪಡೆ ಮತ್ತು ಕಂಪನಿ ನಡುವಿನ ಸಹಭಾಗಿತ್ವಕ್ಕೆ 70 ವಸಂತಗಳು ಸಂದಿವೆ. ರಫೇಲ್‌ ಮೂಲಕ ನೌಕಾಪಡೆಯ ನಿರೀಕ್ಷೆಯನ್ನು ಸಾಕಾರಗೊಳಿಸಿದ್ದೇವೆ' ಎಂದು ಕಂಪನಿಯ ಅಧ್ಯಕ್ಷ ಹಾಗೂ ಸಿಇಒ ಎರಿಕ್ ಟ್ರಾಪಿಯರ್ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries