ಕಾಸರಗೋಡು :2020ರ ಡಿ. 30ನೇ ದಿನಾಂಕದ ಗೆಜೆಟ್ ಅಧಿಸೂಚನೆಯ ಪ್ರಕಾರ ಜಿಲ್ಲಾ ಶಿಕ್ಷಣ ಇಲಾಖೆಯಲ್ಲಿ ಸಂಗೀತ ಶಿಕ್ಷಕರ (ಪ್ರೌಢಶಾಲೆ) (ವರ್ಗ ಸಂಖ್ಯೆ: 391/2020) ಹುದ್ದೆಗೆ ಅರ್ಹ ಅಭ್ಯರ್ಥಿಗಳ ಶಾರ್ಟ್‍ಲಿಸ್ಟ್ ಮಾಡಲಾಗಿದ್ದು, ಜುಲೈ 26 ರಂದು ಲೋಕ ಸೇವಾ ಆಯೋಗವು ಕಾಸರಗೋಡು ಜಿಲ್ಲಾ ಕಚೇರಿಯಲ್ಲಿ ಸಂದರ್ಶನ ನಡೆಸಲಿದೆ.
ಸಂದರ್ಶನದ ಮೆಮೊ ಈಗಾಗಲೇ ಅಭ್ಯರ್ಥಿಯ ಪೆÇ್ರಫೈಲ್‍ನಲ್ಲಿ ಲಭ್ಯವಿದೆ. ಡೌನ್‍ಲೋಡ್ ಮಾಡಿದ ಸಂದರ್ಶನದ ಮೆಮೊ, ಮೂಲ ಪ್ರಮಾಣಪತ್ರಗಳು ಮತ್ತು ಒಂದು ಬಾರಿ ಪರಿಶೀಲನೆ ಪ್ರಮಾಣಪತ್ರದೊಂದಿಗೆ ಅದೇ ದಿನ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಕೇರಳ ಲೋಕಸೇವಾ ಆಯೋಗದ ಜಿಲ್ಲಾ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.