ಮುಂಬೈ : ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಖಲಾಪುರ ತಾಲ್ಲೂಕಿನ ಇರ್ಶಾಲವಾಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೇರಿದೆ. ಶೋಧ ಮತ್ತು ರಕ್ಷಣಾ ತಂಡಗಳು ಶನಿವಾರ ಅವಶೇಷಗಳಡಿ ಸಿಲುಕಿದ್ದ ಇನ್ನೂ ನಾಲ್ಕು ಶವಗಳನ್ನು ಹೊರ ತೆಗೆದಿವೆ.

ಮೂವರು ಮಹಿಳೆಯರು ಮತ್ತು ಒಬ್ಬ ಪುರುಷನ ಮೃತದೇಹ ಪತ್ತೆಯಾಗಿದೆ. ಇದರೊಂದಿಗೆ ಮೃತರ ಸಂಖ್ಯೆ 26 ತಲುಪಿದೆ. 82 ಮಂದಿ ನಾಪತ್ತೆಯಾಗಿರುವುದರಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಇತರೆ ಸರ್ಕಾರಿ ಸಂಸ್ಥೆಗಳು ಮೂರನೇ ದಿನವೂ ಭೂಕುಸಿತ ಪ್ರದೇಶದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ. ಧಾರಾಕಾರವಾಗಿ ಸುರಿದ ಮಳೆಯೇ ಅವಘಡಕ್ಕೆ ಕಾರಣವಾಗಿದೆ. ಈ ಹಳ್ಳಿಯಲ್ಲಿ 48 ಮನೆಗಳಿದ್ದು, ಈ ಪೈಕಿ 17 ಮನೆಗಳು ನೆಲಸಮಗೊಂಡಿವೆ.