ಕಾಸರಗೋಡು: ಕರಿಂದಳ ಸರ್ಕಾರಿ ಕಾಲೇಜಿನಲ್ಲಿ ನಕಲಿ ಕೆಲಸದ ಅನುಭವ ಪ್ರಮಾಣ ಪತ್ರ ನೀಡಿ ಉದ್ಯೋಗ ಗಿಟ್ಟಿಸಿಕೊಂಡ ಪ್ರಕರಣದಲ್ಲಿ ವಿದ್ಯಾ ವಿರುದ್ಧ ಕೌಂಟರ್ ಪಿಟಿಷನ್ ಜಾರಿಯಾಗಿದೆ.
ವರದಿಯು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಕಳಂಕ ತಂದಿದೆ ಎಂದು ಬೊಟ್ಟುಮಾಡಿದೆ. ಎರ್ನಾಕುಳಂ ಮಹಾರಾಜರಂತಹ ಮಹಾನ್ ಕಾಲೇಜಿಗೆ ಮಾನಹಾನಿಯಾಗಿದೆ. ನ್ಯಾಯಾಲಯದಲ್ಲಿ ಪೆÇಲೀಸರ ವರದಿ ಪ್ರಕಾರ ವಿದ್ಯಾ ಹಂಗಾಮಿ ಶಿಕ್ಷಕಿ ಕೆಲಸ ಪಡೆದು ಸರ್ಕಾರಕ್ಕೆ ವಂಚನೆ ಮಾಡಿ 2,78,250 ರೂ. ಪೀಕಿಸಿರುವುದನ್ನು ಉಲ್ಲೇಖಿಸಿದೆ.
ನಿನ್ನೆ ವಿದ್ಯಾ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೊಸದುರ್ಗ ನ್ಯಾಯಾಲಯ, ತನಿಖಾ ತಂಡಕ್ಕೆ ಪ್ರತಿ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಮತ್ತು ಬೆದರಿಕೆ ಅಥವಾ ಇನ್ನಾವುದೇ ರೀತಿಯಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು ಕೂಡದೆಂದು ತಿಳಿಸಿತ್ತು. ಅವರು ತನಿಖೆಗೆ ಸಹಕರಿಸುವ ಸಾಧ್ಯತೆ ಕಡಿಮೆ. ಜಾಮೀನು ಮಂಜೂರಾತಿ ವಿರುದ್ಧ ಪೋಲೀಸರು ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿರುವ ವಿಷಯಗಳಿವು.
ನಕಲಿ ದಾಖಲೆ ನೀಡಿ ಕರಿಂದಳ ಸರ್ಕಾರಿ ಕಾಲೇಜಿನಲ್ಲಿ ಉದ್ಯೋಗ ಪಡೆದ ಪ್ರಕರಣದಲ್ಲಿ ನಿನ್ನೆ ಹೊಸದುರ್ಗ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (2) ನ್ಯಾಯಾಲಯವು ವಿದ್ಯಾಳಿಗೆ ಜಾಮೀನು ನೀಡಿತ್ತು.