ತ್ರಿಶೂರ್: ಮೊಮ್ಮಗನೋರ್ವ ವಯೋವೃದ್ದ ದಂಪತಿಯನ್ನು ಕಡಿದು ಕೊಂದಿರುವ ಘಟನೆ ತ್ರಿಶೂರ್ ನಲ್ಲಿ ನಡೆದಿದೆ. ತ್ರಿಶೂರ್‍ನ ಉತ್ತರದ ವೈಲತ್ತೂರಿನಲ್ಲಿ ಈ ದಾರುಣ ಘಟನೆ ನಡೆದಿದೆ. ಮಾನಸಿಕ ಅಸ್ವಸ್ಥ ತನ್ನ ಅಜ್ಜ ಮತ್ತು ಅಜ್ಜಿಯನ್ನು ಹತ್ಯೆಗೈದಿದ್ದಾನೆ.
ವಡಕ್ಕೇದಡ್ ನಿವಾಸಿ ಅಬ್ದುಲ್ಲಕುಟ್ಟಿ (65) ಮತ್ತು ಅವರ ಪತ್ನಿ ಜಮೀಲಾ (60) ಮೃತಪಟ್ಟವರು. ಇಂದು ಬೆಳಗ್ಗೆ ಈ ದುರಂತ ಘಟನೆ ನಡೆದಿದೆ. ಇವರ ಮೊಮ್ಮಗ ಅಕ್ಮಲ್ (27) ಆರೋಪಿ. ಮೊಮ್ಮಗ ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ.
ಮೊಮ್ಮಗನನ್ನು ನಿನ್ನೆ ತಿರೂರಿನ ಮಾನಸಿಕ ಆರೋಗ್ಯ ಕೇಂದ್ರದಿಂದ ಮನೆಗೆ ಕರೆತರಲಾಗಿತ್ತು. ಯುವಕ ತನ್ನ ಅಜ್ಜ ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಿದ್ದ. ಅಕ್ಮಲ್‍ನ ತಾಯಿ ಮರು ವಿವಾಹವಾಗಿದ್ದರು. ಇಂದು ಬೆಳಗ್ಗೆ ಆಹಾರದೊಂದಿಗೆ ಬಂದಿದ್ದ ಸಂಬಂಧಿಯೊಬ್ಬರಿಗೆ ಕೊಲೆಯಾದ ವಿಷಯ ಮೊದಲು ತಿಳಿಯಿತು. ಆರೋಪಿಯನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಇತರ ಪ್ರಕ್ರಿಯೆಗಳು ಮುಗಿದ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತ್ರಿಶೂರ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು.