ಲಖನೌ: ಕಾಶಿ ವಿಶ್ವನಾಥ ದೇವಸ್ಥಾನ -ಜ್ಞಾನವಾಪಿ ಮಸೀದಿ ಆವರಣದ ಭೂಮಿಯ ಸಂಪೂರ್ಣ ಮಾಲೀಕತ್ವ ಕೋರಿ ಸಲ್ಲಿಸಿದ್ದ ಸಿವಿಲ್ ವ್ಯಾಜ್ಯದ ಕ್ರಮಬದ್ಧತೆಯನ್ನು ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಕಾಯ್ದಿರಿಸಿದೆ.
ಲಖನೌ: ಕಾಶಿ ವಿಶ್ವನಾಥ ದೇವಸ್ಥಾನ -ಜ್ಞಾನವಾಪಿ ಮಸೀದಿ ಆವರಣದ ಭೂಮಿಯ ಸಂಪೂರ್ಣ ಮಾಲೀಕತ್ವ ಕೋರಿ ಸಲ್ಲಿಸಿದ್ದ ಸಿವಿಲ್ ವ್ಯಾಜ್ಯದ ಕ್ರಮಬದ್ಧತೆಯನ್ನು ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಕಾಯ್ದಿರಿಸಿದೆ.
ದೇವಸ್ಥಾನ ಮತ್ತು ಮಸೀದಿ ಆವರಣದ ಸಂಪೂರ್ಣ ಮಾಲೀಕತ್ವ ಕೋರಿ ಹಿಂದೂ ಅರ್ಜಿದಾರರು ಕೆಲವು ತಿಂಗಳ ಹಿಂದೆ ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
1991ರ ಪ್ರಾರ್ಥನಾ ಸ್ಥಳಗಳ ಕಾಯ್ದೆಯಂತೆ ಸಿವಿಲ್ ವ್ಯಾಜ್ಯ ಅಂಗೀಕಾರ್ಹವಾದುದಲ್ಲ ಎಂದು ಮಸೀದಿ ಸಮಿತಿಯು ಪ್ರತಿಪಾದಿಸಿದೆ. ಉಭಯತ್ರರ ವಾದವನ್ನು ಆಲಿಸಿದ ಹೈಕೋರ್ಟ್, ಈ ಕುರಿತ ತೀರ್ಪನ್ನು ಶುಕ್ರವಾರ ಪ್ರಕಟಿಸಲಾಗುವುದು ಎಂದು ತಿಳಿಸಿತು.
ಸಮೀಕ್ಷೆಗೆ ತಡೆ ಕೋರಿ ಮೇಲ್ಮನವಿ: ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿದ್ದ ವಾರಾಣಸಿ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಕೋರಿ ಮುಸ್ಲಿಂ ಅರ್ಜಿದಾರರು ಅಲಹಾಬಾದ್ ಹೈಕೋರ್ಟ್‌ಗೆ ಮಂಗಳವಾರ ಮೇಲ್ಮನವಿಯನ್ನು ಸಲ್ಲಿಸಿದರು.
ಅಲ್ಲದೆ, ವುಜುಖಾನಾ ಪ್ರದೇಶ ಬಿಟ್ಟು ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಕೋರ್ಟ್ ಆದೇಶಿಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಸಂಜೆಯವರೆಗೂ ತಡೆಯಾಜ್ಞೆ ನೀಡಿದೆ.