ಮುಂಬೈ: ಅದಾನಿ ಎಂಟರ್ ಪ್ರೈಸಸ್ ಸಂಸ್ಥೆ ರೈಲು ಟಿಕೆಟ್ ಬುಕಿಂಗ್ ವೇದಿಕೆ ಟ್ರೈನ್ ಮ್ಯಾನ್ ನಲ್ಲಿ ಶೇ.30 ರಷ್ಟು ಷೇರುಗಳನ್ನು 3.5 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದೆ.
ಸ್ಟಾರ್ಟ್ ಎಂಟರ್ ಪ್ರೈಸಸ್ ಟ್ರೈನ್ ಮ್ಯಾನ್ ವೇದಿಕೆಯ ಮಾತೃಸಂಸ್ಥೆಯಾಗಿದೆ. ಕಳೆದ ತಿಂಗಳು ಎಸ್ಇಪಿಎಲ್ ನ ಶೇ.100 ರಷ್ಟು ಷೇರುಗಳನ್ನು ಖರೀದಿಸುವುದಾಗಿ ಅದಾನಿ ಸಂಸ್ಥೆ ಘೋಷಿಸಿತ್ತು.
ಷೇರು ವಿನಿಮಯ ಫೈಲಿಂಗ್ ನೀಡಿದ ಮಾಹಿತಿಯ ಪ್ರಕಾರ, ಅದಾನಿ ಡಿಜಿಟಲ್ ಲ್ಯಾಬ್ ಪ್ರೈವೆಟ್ ಲಿಮಿಟೆಡ್ ಎಸ್ಇಪಿಎಲ್ ನಲ್ಲಿ 3.56 ಕೋಟಿ ರೂಪಾಯಿಗಳಿಗೆ ಶೇ.29.81 ರಷ್ಟು ಪಾಲನ್ನು ಖರೀದಿಸಿದೆ. ಎಸ್ಇಪಿಎಲ್ 2022-23 ರಲ್ಲಿ (ಏಪ್ರಿಲ್ 2022- 2023 ರ ಮಾರ್ಚ್ ವರೆಗೆ) 4.51 ಕೋಟಿ ರೂಪಾಯಿ ಆದಾಯವನ್ನು ಹೊಂದಿತ್ತು.