ತ್ರಿಶೂರ್: ಲಂಚ ಸ್ವೀಕರಿಸುತ್ತಿದ್ದ ವೈದ್ಯರೋರ್ವರು ವಿಜಿಲೆನ್ಸ್ ಬಲೆಗೆ ಬಿದ್ದಿದ್ದಾರೆ. ತ್ರಿಶೂರ್ ಮೆಡಿಕಲ್ ಕಾಲೇಜಿನ ಆರ್ಥೋಪೆಡಿಕ್ ವಿಭಾಗದ ವೈದ್ಯ ಶೆರ್ರಿ ಐಸಾಕ್ ಬಂಧಿತ ಆರೋಪಿ.
ಶಸ್ತ್ರಚಿಕಿತ್ಸೆಗೆಂದು 3 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಪಾಲಕ್ಕಾಡ್ ಮೂಲದವರೊಬ್ಬರ ಶಸ್ತ್ರಚಿಕಿತ್ಸೆಗೆ ಲಂಚದ ಬೇಡಿಕೆ ಇಟ್ಟಿದ್ದರು. ನಂತರ ವಿಜಿಲೆನ್ಸ್ ಶೆರ್ರಿ ಐಸಾಕ್ ಮನೆಯಲ್ಲಿ 15 ಲಕ್ಷ ರೂ. ಪತ್ತೆಮಾಡಿದೆ.
ಮೊದಲ ಹಂತದಲ್ಲಿ ಲಂಚ ನೀಡಲು ದೂರುದಾರರು ನಿರಾಕರಿಸಿದ್ದರು. ಇದರಿಂದಾಗಿ ವೈದ್ಯರು ಹಲವು ಬಾರಿ ಶಸ್ತ್ರಚಿಕಿತ್ಸೆ ಮುಂದೂಡಿದರು. ಕೊನೆಗೆ ಆರೋಪಿಯು ತನ್ನ ಖಾಸಗಿ ಪ್ರಾಕ್ಟೀಸ್ ವಡಕಂಚೇರಿ ಚಿಕಿತ್ಸಾಲಯಕ್ಕೆ ಹಣವನ್ನು ತಲುಪಿಸುವಂತೆ ಹೇಳಿದರು. ಇದರೊಂದಿಗೆ ದೂರುದಾರರು ತ್ರಿಶೂರ್ ವಿಜಿಲೆನ್ಸ್ ಡಿವೈಎಸ್ಪಿಗೆ ಮಾಹಿತಿ ನೀಡಿದ್ದಾರೆ.
ವಿಜಿಲೆನ್ಸ್‍ನ ಸೂಚನೆಯಂತೆ ದೂರುದಾರರು ಒಟ್ಟುಪಾರದಲ್ಲಿರುವ ಕ್ಲಿನಿಕ್‍ಗೆ ಆಗಮಿಸಿ ಫೀನಾಲ್ಫ್ತಾಲಿನ್ ಲೇಪಿತ ಚೀಟಿಯನ್ನು ವೈದ್ಯರಿಗೆ ನೀಡಿದ್ದಾರೆ. ಅಷ್ಟರಲ್ಲಿ ಪಕ್ಕದಲ್ಲಿ ಅಡಗಿದ್ದ ಜಾಗೃತ ದಳ ಆರೋಪಿಯನ್ನು ರೆಡ್‍ಹ್ಯಾಂಡ್ ಆಗಿ ಹಿಡಿದಿದೆ. ವಿಜಿಲೆನ್ಸ್ ಡಿವೈಎಸ್ಪಿ ಜಿಮ್ ಪಾಲ್ ಸಿಜಿ ನೇತೃತ್ವದಲ್ಲಿ ವೈದ್ಯರನ್ನು ಬಂಧಿಸಲಾಗಿದೆ.