HEALTH TIPS

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಪ್ರಚಾರಕ್ಕಾಗಿ ₹3,064 ಕೋಟಿ ಖರ್ಚು

             ವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಕಾರ್ಯಕ್ರಮಗಳು ಮತ್ತು ಯೋಜನೆಗಳ ಪ್ರಚಾರಕ್ಕಾಗಿ 2018-19ನೇ ಸಾಲಿನಿಂದ 2023ರ ಜುಲೈ 13ಕ್ಕೆ ಅನ್ವಯಿಸಿ ₹3,064 ಕೋಟಿ ವ್ಯಯಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈಚೆಗೆ ರಾಜ್ಯಸಭೆಗೆ ತಿಳಿಸಿದೆ.

                 ಒಟ್ಟು ವೆಚ್ಚದಲ್ಲಿ ಮುದ್ರಣ ಮಾಧ್ಯಮಗಳ ಜಾಹೀರಾತುಗಳಿಗೆ ಹೆಚ್ಚು ವ್ಯಯಿಸಲಾಗಿದೆ. ಮುದ್ರಣ ಮಾಧ್ಯಮಕ್ಕೆ ₹1,338 ಕೋಟಿ, ವಿದ್ಯುನ್ಮಾನ ಮಾಧ್ಯಮಕ್ಕೆ ₹1,273 ಕೋಟಿ ಮತ್ತು ಬಹಿರಂಗ ಪ್ರಚಾರಕ್ಕೆ ₹452 ಕೋಟಿ ಖರ್ಚಾಗಿದೆ.

               ದತ್ತಾಂಶದ ಪ್ರಕಾರ, 2018-19ನೇ ಸಾಲಿನಲ್ಲಿ ಜಾಹೀರಾತು ಮತ್ತು ಪ್ರಚಾರದ ಒಟ್ಟು ವೆಚ್ಚವು ₹1,179 ಕೋಟಿ ಇತ್ತು. ನಂತರದ ವರ್ಷಗಳಲ್ಲಿ ಈ ವೆಚ್ಚದಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, 2019-20ನೇ ಸಾಲಿನಲ್ಲಿ ₹708 ಕೋಟಿ, 2020-21ನೇ ಸಾಲಿನಲ್ಲಿ ₹409 ಕೋಟಿ ಮತ್ತು 2021-22ನೇ ಸಾಲಿನಲ್ಲಿ ₹315 ಕೋಟಿ ವ್ಯಯಿಸಲಾಗಿದೆ. 2022- 23ನೇ ಸಾಲಿನಲ್ಲಿ ಪುನಃ ಏರಿಕೆ ಕಂಡುಬಂದಿದ್ದು, ₹408 ಕೋಟಿ ಖರ್ಚು ಮಾಡಲಾಗಿದೆ.

              ಈ ವರ್ಷ ಏಪ್ರಿಲ್‌ ಮತ್ತು ಜುಲೈ 13ರ ಒಳಗೆ ಜಾಹೀರಾತಿಗಳ ಮೇಲೆ ಸರ್ಕಾರವು ₹43 ಕೋಟಿ ಖರ್ಚು ಮಾಡಿದೆ ಎಂದು ಹೇಳಲಾಗಿದೆ.

              2018-19 ಮತ್ತು 2019-20ನೇ ಸಾಲಿನಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಜಾಹೀರಾತುಗಳಿಗೆ ಸರ್ಕಾರ ಹೆಚ್ಚು ಹಣ ಖರ್ಚು ಮಾಡಿತ್ತು. ಬಳಿಕ ಮೂರು ಆರ್ಥಿಕ ವರ್ಷಗಳಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಜಾಹೀರಾತುಗಳ ವೆಚ್ಚದ ಪಾಲಿನಲ್ಲಿ ಇಳಿಕೆ ಕಂಡುಬಂದಿತು ಎಂದು ಸರ್ಕಾರ ನೀಡಿರುವ ದತ್ತಾಂಶವನ್ನು ವಿಶ್ಲೇಷಿಸಿದ ವೇಳೆ ತಿಳಿದುಬಂದಿದೆ.

              2018-19 ಸಾಲಿನಲ್ಲಿ ಬಹಿರಂಗ ಪ್ರಚಾರಕ್ಕೆ ಸರ್ಕಾರವು ₹235 ಕೋಟಿ ವ್ಯಯಿಸಿತ್ತು. 2022-23ನೇ ಸಾಲಿನಲ್ಲಿ ಈ ಮೊತ್ತವು ₹32 ಕೋಟಿಗೆ ಇಳಿದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈವರೆಗೆ ಬಹಿರಂಗ ಪ್ರಚಾರಕ್ಕೆ ಸರ್ಕಾರದಿಂದ ₹8.70 ಕೋಟಿ ಖರ್ಚಾಗಿದೆ.

                ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಸಂಸದ ಅಭೀರ್‌ ರಂಜನ್‌ ಬಿಸ್ವಾಸ್‌ ಅವರು ದತ್ತಾಂಶ ಸಂಗ್ರಹಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ್ದರು. ಲಿಖಿತ ಉತ್ತರ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಕೇಂದ್ರೀಯ ಸಂವಹನ ಬ್ಯೂರೊ (ಸಿಬಿಸಿ) ಹಲವು ಬಗೆಯ ಮಾಧ್ಯಮಗಳ ಮೂಲಕ ಕೈಗೊಂಡ ಪ್ರಚಾರ ಕಾರ್ಯಗಳ ಕುರಿತು ಸ್ವತಂತ್ರ ಸಂಸ್ಥೆಯೊಂದು ನಡೆಸಿದ 'ಅಖಿಲ ಭಾರತ ಸಮೀಕ್ಷೆ/ ಪರಿಣಾಮ ಮೌಲೀಕರಣ ಅಧ್ಯಯನ'ದಿಂದ ಈ ಮಾಹಿತಿ ದೊರಕಿದೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries