ಬದಿಯಡ್ಕ : ಕರ್ನಾಟಕ ಸರಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗ್ರಾಮ ಪರ್ಯಟನೆಯ 6ನೇ ಕಾರ್ಯಕ್ರಮವು ಜು.30ರಂದು ಬೆಳಗ್ಗೆ 9.30ರಿಂದ ನೀರ್ಚಾಲು ಸಮೀಪz ಕುಂಟಿಕಾನ ಎಎಸ್‍ಬಿ ಶಾಲೆಯಲ್ಲಿ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ರಂಗಸಿರಿ ಸಾಂಸ್ಕøತಿಕ ವೇದಿಕೆಯ ಹಿರಿಯ ಪದಾಧಿಕಾರಿಗಳಾದ ದಿನೇಶ್ ಬೊಳುಂಬು ವಹಿಸಲಿದ್ದಾರೆ. 'ಕನ್ನಡ ಪ್ರಜ್ಞೆಯನ್ನು ಬೆಳೆಸುವುದು ಹೇಗೆ' ಎಂಬ ವಿಚಾರದಲ್ಲಿ ಶಿಕ್ಷಕ ರಾಜೇಶ್ ಎಸ್ ಉಬ್ರಂಗಳ ವಿಚಾರ ಮಂಡಿಸುವರು. ಈ ಸಂದರ್ಭದಲ್ಲಿ ಹಿರಿಯ ಸಂಘಟಕ ಕುಂಟಿಕಾನ ವೆಂಕಟೇಶ್ವರ ಭಟ್ಟರಿಗೆ ಗೌರವಾರ್ಪಣೆ ನಡೆಯಲಿದೆ. ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ ಅಬ್ಬಾಸ್, ಕುಂಟಿಕಾನ ಶಾಲಾ ಮುಖ್ಯ ಶಿಕ್ಷಕ ವಿ ವೆಂಕಟರಾಜ ಶುಭಾಶಂಸನೆ ಮಾಡುವರು. ಕಾರ್ಯಕ್ರಮದಲ್ಲಿ ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಡೆದ ಅಡೂರು ಕೊರತಿಮೂಲೆ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥದ ಕನ್ನಡ ಕವನ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಬಿ ಸತ್ಯವತಿ ಭಟ್ ಕೊಳಚಪ್ಪು ಮಂಗಳೂರು (ಪ್ರಥಮ), ಸ್ನೇಹಲತಾ ದಿವಾಕರ್ ಕುಂಬ್ಳೆ (ದ್ವಿತೀಯ) ಹಾಗೂ ರಾಜೇಂದ್ರ ಕೇದಿಗೆ ಮಂಗಳೂರು (ತೃತೀಯ) ಇವರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು. ನಂತರ ನಡೆಯುವ ಆಟಿಯ ಕುರಿತ ವಿಶೇಷ ಕಾರ್ಯಾಗಾರವನ್ನು ಸಾಹಿತಿ, ನಿವೃತ್ತ ಶಿಕ್ಷಕ ಭಾಸ್ಕರ ಅಡ್ವಳ ನಿರ್ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು, ಕಾರ್ಯದರ್ಶಿ ಡಾ. ಶೀಶ ಕುಮಾರ ಪಿ, ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ವಿರಾಜ್ ಅಡೂರು ಮೊದಲಾದವರು ಭಾಗವಹಿಸುವರು.