ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಬಜಕೂಡ್ಲು ಕಾನ ಎಂಬಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಗೊಳಪಡಿಸಿ ನಿರ್ಮಿಸಿದ ನೂತನ ಬಡ್ಸ್ ಶಾಲಾ ಕಟ್ಟಡದ ಉದ್ಘಾಟನೆಯನ್ನು ಜುಲೈ 31ರಂದು ರಾಜ್ಯ ಪರಿಶಿಷ್ಟ ಹಾಗೂ ಹಿಂದುಳಿದ ವಿಭಾಗ ಮತ್ತು ದೇವಸ್ವಂ ಬೋರ್ಡ್ ಸಚಿವ ಕೆ.ರಾಧಾಕೃಷ್ಣನ್ ಉದ್ಘಾಟಿಸಲಿರುವರು. ಈ ಕಾರ್ಯಕ್ರಮದ ಯಶಸ್ವಿಯ ಬಗ್ಗೆ ಸ್ವಾಗತ ಸಮಿತಿ ರೂಪೀಕರಣ ಸಭೆ ಗ್ರಾ.ಪಂ.ಸೋಮಶೇಖರ್ ಜೆ.ಎಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಣ್ಮಕಜೆ ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂಚಾಯತಿ ಸದಸ್ಯರಾದ ನರಸಿಂಹ ಪೂಜಾರಿ, ಸೌದಾಭಿ ಹನೀಫ್, ರಮ್ಲ, ಉಷಾಕುಮಾರಿ,ಝರೀನಾ ಮುಸ್ತಾಫ, ಮುಸ್ಲಿಂಲೀಗ್ ಪಂಚಾಯತಿ ಸಮಿತಿ ಅಧ್ಯಕ್ಷ ಶೇರಿಫ್, ನೇತಾರ ಸಿದ್ದೀಕ್ ಹಾಜಿ, ಆಯಿಷಾ ಎ.ಎ., ಸಿಪಿಐಎಂ ಎಣ್ಮಕಜೆ ಲೋಕಲ್ ಸಮಿತಿ ಕಾರ್ಯದರ್ಶಿ ವಿನೋದ್ , ರಾಮಕೃಷ್ಣ ರೈ ಕುದ್ವ, ಮೊಹಮ್ಮದ್ ಹನೀಫ್ ನಡುಬೈಲ್, ಅಬ್ದುಲ್ಲ ಬಾಳಿಗ, ಆಶ್ರಫ್ ಅಮೆಗೋ, ಕಿರು ಕೈಗಾರಿಕಾ ಜಿಲ್ಲಾಧ್ಯಕ್ಷ ರಾಜರಾಮ ಪೆರ್ಲ, ಉದ್ಯೋಗ ಖಾತರಿ ಅಭಿಯಂತರ ನವಾಸ್ ಮತ್ರ್ಯ ಮೊದಲಾದವರು ಉಪಸ್ಥಿತರಿದ್ದರು. ಬಡ್ಸ್ ಶಾಲಾ ಪ್ರಾಂಶುಪಾಲೆ ಮರಿಯಾಂಬಿ ಸ್ವಾಗತಿಸಿ, ಅಧ್ಯಾಪಕಿ ಜ್ಯೋತಿ ವಂದಿಸಿದರು.