ನವದೆಹಲಿ: ಮಣಿಪುರದಲ್ಲಿ ಹಿಂಸಾಕೃತ್ಯಗಳು ಆರಂಭವಾದ ಬಳಿಕ ಜುಲೈ 24ರವರೆಗೆ ಒಟ್ಟು 319 ಗರ್ಭಿಣಿಯರಿಗೆ ಪ್ರಸವಪೂರ್ವ ಅವಧಿಯ ಗಂಭೀರ ಸಂದರ್ಭದಲ್ಲಿ ಆರೈಕೆಯನ್ನು ನೀಡಲಾಗಿದೆ. ಈ ಅವಧಿಯಲ್ಲಿ 139 ಗರ್ಭಿಣಿಯರು ಶಿಶುವಿಗೆ ಜನ್ಮನೀಡಿದ್ದಾರೆ.
ನವದೆಹಲಿ: ಮಣಿಪುರದಲ್ಲಿ ಹಿಂಸಾಕೃತ್ಯಗಳು ಆರಂಭವಾದ ಬಳಿಕ ಜುಲೈ 24ರವರೆಗೆ ಒಟ್ಟು 319 ಗರ್ಭಿಣಿಯರಿಗೆ ಪ್ರಸವಪೂರ್ವ ಅವಧಿಯ ಗಂಭೀರ ಸಂದರ್ಭದಲ್ಲಿ ಆರೈಕೆಯನ್ನು ನೀಡಲಾಗಿದೆ. ಈ ಅವಧಿಯಲ್ಲಿ 139 ಗರ್ಭಿಣಿಯರು ಶಿಶುವಿಗೆ ಜನ್ಮನೀಡಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು ಶುಕ್ರವಾರ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
ಮಣಿಪುರದಲ್ಲಿ ಹಿಂಸೆಯಿಂದ ಬಾಧಿತವಾಗಿರುವ ಪ್ರತಿ ಜಿಲ್ಲೆಯಲ್ಲಿನ ನಿಯೋಜಿತ ಪರಿಹಾರ ಶಿಬಿರಗಳಲ್ಲಿರುವ ಬಾಧಿತ ಮಹಿಳೆಯರಿಗೆ ಸಮಗ್ರ ಆರೋಗ್ಯ ಚಿಕಿತ್ಸಾ ಸೇವೆಯನ್ನು ಒದಗಿಸಲು ವೈದ್ಯರ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಮಣಿಪುರಕ್ಕೆ ಮೇ ತಿಂಗಳಲ್ಲಿ ತಲಾ ನಾಲ್ಕು ಮಂದಿ ವೈದ್ಯರಿರುವ 6 ತಂಡಗಳನ್ನು ನಿಯೋಜಿಸಿದ್ದರೆ, ಜುಲೈ ತಿಂಗಳಲ್ಲಿ ಮತ್ತೊಂದು ತಂಡವನ್ನು ಕಳುಹಿಸಿಕೊಟ್ಟಿದೆ. ಎಲ್ಲ ಪರಿಹಾರ ಶಿಬಿರಗಳಲ್ಲಿ ನಿಯಮಿತ ಆರೋಗ್ಯ ತಪಾಸಣೆ ನಡೆಯುತ್ತಿದೆ. ಗಂಭೀರ ಪರಿಸ್ಥಿತಿ ಇದ್ದಲ್ಲಿ ಸಮೀಪದ ಆಸ್ಪತ್ರೆಗಳಿಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗುತ್ತಿದೆ ಎಂದು ಸಚಿವೆ ವಿವರಿಸಿದ್ದಾರೆ.