ಕಾಸರಗೋಡು: ಕೇರಳ ನಾಲೆಡ್ಜ್ ಎಕಾನಮಿ ಮಿಷನ್ ಮತ್ತು ಕುಟುಂಬಶ್ರೀ ಜೊತೆಯಾಗಿ ಜಾರಿಗೊಳಿಸಿರುವ 'ಮೈ ಜಾಬ್ ಮೈ ಪ್ರೈಡ್'ಯೋಜನೆಯ ಅಂಗವಾಗಿ ಜುಲೈ 31ರಂದು ಚಾಲಿಂಗಲ್‍ನ ಶ್ರೀ ನಾರಾಯಣಗುರು ಚಾರಿಟಬಲ್ ಟ್ರಸ್ಟ್ ಇಂಡಿಯನ್ ಕಾನ್ಫೆಡರೇಶನ್ ಆಫ್ ಇಂಡಸ್ಟ್ರಿಯೊಂದಿಗೆ ಸೇರಿ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತದೆ. ಡಿ.ಡಬ್ಲ್ಯೂ.ಎಂ.ಎಸ್ ಮೂಲಕ ನೋಂದಾಯಿಸಲಾದ ಪ್ಲಸ್ ಟು ಗಿಂತ ಹೆಚ್ಚಿನ ವಿದ್ಯಾರ್ಹತೆಯಿರುವ ಯುವತಿ ಯುವಕರಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಬಿಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್, ಕಸ್ಟಮರ್ ರಿಲೇಷನ್ ಆಫೀಸರ್,ಅಡ್ಮಿನಿಸ್ಟ್ರೇಟರ್,ಹೆಚ್.ಆರ್ ಮ್ಯಾನೇಜರ್ ಮುಂತಾದ ವಿವಿಧ ಹುದ್ದೆಗಳಿಗಾಗಿ ಪ್ರಮುಖ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ.ಸ್ಪಾಟ್ ರಿಜಿಸ್ಟ್ರೇಷನ್ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಕುಟುಂಬಶ್ರೀ ಸಿ.ಡಿ.ಎಸ್ ಕಚೇರಿ ಅಥವಾ ಕಮ್ಯುನಿಟಿ ಅಂಬಾಸಿಡರನ್ನು ಸಂಪರ್ಕಿಸಬಹುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 256111)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.