ಮಂಜೇಶ್ವರ : ಗಡಿನಾಡಿನ ಪ್ರಸಿದ್ದ ಯಕ್ಷಗಾನ ತಂಡವಾದ ಯಕ್ಷಬಳಗ ಹೊಸಂಗಡಿ ತಂಡದ 33ನೇ ವರ್ಷದ ಕರ್ಕಟಕ ಮಾಸ ಯಕ್ಷಗಾನ ತಾಳಮದ್ದಳೆ ಕೂಟ ಇತ್ತೀಚೆಗೆ ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕ್ಷೇತ್ರ ಅರ್ಚಕ ರಾಜಗೋಪಾಲ ಬನ್ನಿಂತಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ನಾರಾಯಣ ಪೂಜಾರಿ ಬೆಜ್ಜಂಗಳ ಉಪಸ್ಥಿತರಿದ್ದರು. ತಂಡದ ಸಂಚಾಲಕ ಸತೀಶ ಅಡಪ ಸಂಕಬೈಲು ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಪಂಚವಟಿ ಶೂರ್ಪನಖಾ ನಾಸಾಚ್ಛೇದ ತಾಳಮದ್ದಳೆ ಜರಗಿತು. ಭಾಗವತರಾಗಿ ರತ್ನಾಕರ ಆಳ್ವ ದೇವಿಪುರ, ಶಿಶಿರ ಕೃಷ್ಣ ಬಲ್ಲಾಳ್, ಚೈತನ್ಯ ಕೃಷ್ಣ ಸಹಕರಿಸಿದರು. ಚೆಂಡೆ ಮದ್ದಳೆಯಲ್ಲಿ ಕೃಷ್ಣಪ್ಪ ಕಿನ್ಯ, ರಾಜಾರಾಮ ಬಲ್ಲಾಳ್ ಚಿಪ್ಪಾರು ಚೆಂಡೆಮದ್ದಳೆ ಸಹಕರಿಸಿದರು.
ಪಾತ್ರವರ್ಗದಲ್ಲಿ ವಿಠಲ ಭಟ್ ಮೊಗಸಾಲೆ(ರಾಮ), ರಾಜಾರಾಮ ರಾವ್ ಮೀಯಪದವು(ಲಕ್ಷ್ಮಣ), ನಾರಾಯಣ ಪೂಜಾರಿ ಬೆಜ್ಜಂಗಳ(ಘೋರ ಶೂರ್ಪನಖಿ), ಜಯರಾಮ ಭಟ್ ದೇವಸ್ಯ(ಮಾಯಾ ಶೂರ್ಪನಖಿ), ಶಂಕರ ಆಚಾರ್ಯ ಕೋಳ್ಯೂರು(ಸೀತೆ), ಮತ್ತು ಋಷಿಗಳಾಗಿ ಸತೀಶ ಅಡಪ ಸಂಕಬೈಲು ಹಾಗೂ ನಾಗರಾಜ ಪದಕಣ್ಣಾಯ ಮೂಡಂಬೈಲು ರಂಜಿಸಿದರು.