ನವದೆಹಲಿ: ಇಂದು ಮಂಗಳವಾರ ಎನ್ ಡಿಎ ಮಿತ್ರಪಕ್ಷಗಳ ಸಭೆ ನಡೆಯಲಿದ್ದು, ಅದರಲ್ಲಿ 38 ಪಕ್ಷಗಳು ಭಾಗಿಯಾಗಲಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ನಡ್ಡಾ, ವರ್ಷಗಳಿಂದ ಎನ್ ಡಿಎ ವ್ಯಾಪ್ತಿ ಹಿಗ್ಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯೋಜನೆಗಳು, ನೀತಿಗಳ ಪರಿಣಾಮವಾಗಿ ಎನ್ ಡಿಎ ಮಿತ್ರ ಪಕ್ಷಗಳು ಆಶಾವಾದಿಗಳಾಗಿವೆ.
ಬಿಜೆಪಿ ನೇತೃತ್ವದ ಮೈತ್ರಿಕೂಟದ ಸಭೆ, ಬೆಂಗಳೂರಿನಲ್ಲಿ ವಿಪಕ್ಷಗಳ ಮೈತ್ರಿಕೂಟದ ಸಭೆಯ ದಿನದಂದೇ ನಡೆಯುತ್ತಿರುವುದು ಮತ್ತೊಂದು ಗಮನಾರ್ಹ ಅಂಶವಾಗಿದೆ. ಬಿಜೆಪಿಯನ್ನು 2024 ರ ಚುನಾವಣೆಯಲ್ಲಿ ಕಟ್ಟಿ ಹಾಕುವ ಉದ್ದೇಶದಿಂದ ವಿಪಕ್ಷಗಳ ಮೈತ್ರಿಕೂಟ ಬೆಂಗಳೂರಿನಲ್ಲಿ ಸಭೆ ನಡೆಸುತ್ತಿದೆ.