ತಿರುವನಂತಪುರಂ: ರಾಜ್ಯದಲ್ಲಿ ನಾಲ್ಕನೇ ದರ್ಜೆ ಉದ್ಯೋಗಿಗಳ ಹೆಣ್ಣು ಮಕ್ಕಳ ವಿವಾಹಕ್ಕೆ ನೀಡುವ ಸಾಲದ ಹಣದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಹೇಳಿದ್ದಾರೆ. 4 ನೇ ವರ್ಗ ನೌಕರರು ಪ್ರಸ್ತುತ ರೂ.ಒಂದೂವರೆ ಲಕ್ಷ ಪಡೆಯುತ್ತಿದ್ದರು. ಇದನ್ನು ಮೂರು ಲಕ್ಷಕ್ಕೆ ಏರಿಸಲಾಗಿದೆ.
ಅಲ್ಲದೆ, ಅರೆಕಾಲಿಕ ಅನಿಶ್ಚಿತ ಉದ್ಯೋಗಿಗಳ ಹೆಣ್ಣುಮಕ್ಕಳ ಮದುವೆ ಸಾಲವನ್ನು ಈಗಿರುವ ಒಂದು ಲಕ್ಷ ರೂಪಾಯಿಯಿಂದ ಒಂದೂವರೆ ಲಕ್ಷ ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿರುವರು.