ಶ್ರೀನಗರ : 'ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ, ಗಂದರ್‌ಬಾಲ್ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿ ಸೆಪ್ಟೆಂಬರ್‌ನಲ್ಲಿ ಮೂರು ಹೊಸ ಚಿತ್ರಮಂದಿರಗಳು ತೆರೆಯಲಿವೆ' ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮಂಗಳವಾರ ತಿಳಿಸಿದ್ದಾರೆ.
ಶ್ರೀನಗರ : 'ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ, ಗಂದರ್‌ಬಾಲ್ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿ ಸೆಪ್ಟೆಂಬರ್‌ನಲ್ಲಿ ಮೂರು ಹೊಸ ಚಿತ್ರಮಂದಿರಗಳು ತೆರೆಯಲಿವೆ' ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮಂಗಳವಾರ ತಿಳಿಸಿದ್ದಾರೆ.
ಸಂಗೀತ ನಾಟಕ ಅಕಾಡೆಮಿ ಟ್ಯಾಗೋರ್ ಸಭಾಂಗಣದಲ್ಲಿ ಆಯೋಜಿಸಿದ್ದ ಮೂರು ದಿನಗಳ ಅಮೃತ ಯುವ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
'ಕಳೆದ ಹಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದ ಜನರ ಕನಸು ಮತ್ತು ಆಕಾಂಕ್ಷೆಗಳನ್ನು ಕೊಲ್ಲಲು ಪಾಕಿಸ್ತಾನ ಮತ್ತು ಕೆಲ ಜನರು ಪ್ರಯತ್ನಸುತ್ತಿದ್ದಾರೆ. ಆದರೆ ಜಮ್ಮು ಮತ್ತು ಕಾಶ್ಮೀರದ ನಾಗರಿಕರು, ಯುವಕರು ಹೊಸ ವಾತಾವರಣವನ್ನು ಸೃಷ್ಟಿಸಲು ಹವಣಿಸುತ್ತಿದ್ದಾರೆ. ಶಾಂತಿಯ ನಾಡಿನಲ್ಲಿ ಮಾತ್ರ ಕಲೆ ಅರಳುತ್ತದೆ' ಎಂದರು.
'30 ವರ್ಷಗಳ ನಂತರ ಸಣ್ಣ ನಗರಗಳಲ್ಲಿಯೂ ಚಿತ್ರಮಂದಿರಗಳು ತೆರೆಯುತ್ತಿವೆ. ಕೆಲವು ದಿನಗಳ ಹಿಂದೆ, ಬಾರಾಮುಲ್ಲಾದಲ್ಲಿ ಚಿತ್ರಮಂದಿರವನ್ನು ತೆರೆಯಲಾಯಿತು. ಕಳೆದ ವರ್ಷ ಪುಲ್ವಾಮಾ ಮತ್ತು ಶೋಪಿಯಾನ್‌ನಲ್ಲಿ ಚಿತ್ರಮಂದಿರಗಳನ್ನು ಪ್ರಾರಂಭಿಸಲಾಯಿತು' ಎಂದು ಹೇಳಿದರು.
'ಸಂಗೀತ, ನೃತ್ಯ, ರಂಗಭೂಮಿ,ಸಿನೆಮಾ ಇವು ಕೇವಲ ಕಲಾ ಪ್ರಕಾರಗಳಲ್ಲ. ಬದಲಾಗಿ ನಾಗರಿಕತೆಯ ಅಸ್ತಿತ್ವಗಳಾಗಿವೆ. ಕಲಾವಿದರೆ ದೇಶದ ನಿಜವಾದ ಆಸ್ತಿಯಾಗಿದ್ದಾರೆ. ಅವರು ಹೊಂದಿರುವ ಸಂಪತ್ತನ್ನು ಯಾವುದೇ ಭೌತಿಕ ಸಂಪತ್ತಿನ ಜೊತೆ ಸಮೀಕರಿಸಲು ಸಾಧ್ಯವಿಲ್ಲ' ಎಂದು ಹೇಳಿದರು.
ಪ್ರಪಂಚದ ಅನೇಕ ಸಂಸ್ಕೃತಿಗಳು, ನಾಗರಿಕತೆಗಳು ಕಣ್ಮರೆಯಾಗಿವೆ. ಆದರೆ ಎಲ್ಲ ಸವಾಲುಗಳನ್ನು ಮೆಟ್ಟಿ ಭಾರತೀಯ ಸಂಸ್ಕೃತಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಭಾರತೀಯ ಸಂಸ್ಕೃತಿಯ ಬೇರು ಬಲಿಷ್ಠವಾಗಿದೆ' ಎಂದು ತಿಳಿಸಿದರು.