ಕೊಚ್ಚಿ: ಪಾಪ್ಯುಲರ್ ಫ್ರಂಟ್ ನಾಯಕ ಟಿಎ ಅಯೂಬ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ‘ಪರಾರಿ’ಯಾದವ ಎಂದು ಘೋಷಿಸಿದೆ. ಅಯೂಬ್ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ನ ಸಶಸ್ತ್ರ ವಿಭಾಗದ ನಾಯಕನಾಗಿದ್ದು, ಆತನ ಬಗ್ಗೆ ಮಾಹಿತಿ ನೀಡಿದವರಿಗೆ 3 ಲಕ್ಷ ರೂಪಾಯಿ ನೀಡುವುದಾಗಿ ಎನ್ ಐಎ ಹೇಳಿದೆ.
ಧಾರ್ಮಿಕ ಹಾಗೂ ಕೋಮುವಾದಿಗಳ ನಡುವೆ ವೈಷಮ್ಯ ಮೂಡಿಸಿ ಅಕ್ರಮ ಚಟುವಟಿಕೆ ನಡೆಸಲು ಅಯೂಬ್ ಸಂಚು ರೂಪಿಸಿದ್ದ. ಲಷ್ಕರ್-ಎ-ತೊಯ್ಬಾ, ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್-ಖೈದಾ ಸೇರಿದಂತೆ ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಯುವಕರನ್ನು ಎನ್‍ಐಎ ಉತ್ತೇಜಿಸಿದ್ದ ಎಂದು ವರದಿಯಾಗಿದೆ.
ಕೇರಳದಲ್ಲಿ ಪಿಎಫ್‍ಐ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಭಾಗವಾಗಿ ಎರ್ನಾಕುಳಂ ಜಿಲ್ಲೆಯ ನಿವಾಸಿ ಅಯೂಬ್‍ಗಾಗಿ ಎನ್‍ಐಎ ಹುಡುಕುತ್ತಿದೆ.