ನವದೆಹಲಿ: ಚಂದ್ರನ ದಕ್ಷಿಣ ಧ್ರುವದ ಬಳಿಯ ನಾಲ್ಕು ಕಿ.ಮೀ ಉದ್ದದ ಮತ್ತು 2.5 ಕಿ.ಮೀ ಅಗಲದ ಪ್ರದೇಶವು ಆಗಸ್ಟ್ ಮೂರನೇ ವಾರದಲ್ಲಿ 'ಚಂದ್ರಯಾನ-3' ಇಳಿಯುವ ಜಾಗವಾಗಿರಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯ ಅಧ್ಯಕ್ಷ ಎಸ್ ಸೋಮನಾಥ್ ಸೋಮವಾರ ತಿಳಿಸಿದರು.

ಚಂದ್ರನ ಮೇಲ್ಮೈನಲ್ಲಿ ಅಪ್ಪಳಿಸಿದ್ದ 'ಚಂದ್ರಯಾನ-2' ಕ್ಕೆ ಹೋಲಿಸಿದರೆ 'ಚಂದ್ರಯಾನ-3'ಗೆ ದೊಡ್ಡ ಲ್ಯಾಂಡಿಂಗ್ ವಲಯವನ್ನು ಒದಗಿಸಲಾಗಿದೆ. ಇಸ್ರೋ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಈ ಬಾರಿಯ ಕಾರ್ಯಾಚರಣೆಯಲ್ಲಿ ಹಲವು ಮಹತ್ವದ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.
'ಚಂದ್ರಯಾನ-2ರಂತಹ ಯಶಸ್ಸು ಆಧಾರಿತ ಯೋಜನೆಗೆ ಬದಲಾಗಿ, ಚಂದ್ರಯಾನ-3 ರಲ್ಲಿ ವೈಫಲ್ಯ ಆಧಾರಿತ ವಿನ್ಯಾಸವನ್ನು ಆರಿಸಿಕೊಂಡಿದ್ದೇವೆ! ಕಾರ್ಯಾಚರಣೆ ವೈಫಲ್ಯಕ್ಕೆ ಕಾರಣವಾಗುವ ವಿಷಯಗಳು ಯಾವುವು ಮತ್ತು ಅವುಗಳಿಂದ ಹೇಗೆ ರಕ್ಷಣೆ ಪಡೆಯಬೇಕು ಎಂಬುದರ ಕುರಿತು ನಾವು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ' ಎಂದು 'ಇಂಡಿಯಾ ಸ್ಪೇಸ್ ಕಾಂಗ್ರೆಸ್'ನಲ್ಲಿ ಸೋಮನಾಥ್ ಹೇಳಿದರು.
ಭಾರತದ ಚಂದ್ರಯಾನ-3 ಕಾರ್ಯಚರಣೆಯು ಜುಲೈ 14 ರಂದು ಮಧ್ಯಾಹ್ನ 2.35ಕ್ಕೆ ಉಡಾವಣೆಗೊಳ್ಳಲಿದೆ. ಲ್ಯಾಂಡರ್ ಮತ್ತು ರೋವರ್ ಅನ್ನು ಹೊತ್ತ ಬಾಹ್ಯಾಕಾಶ ನೌಕೆಯು ಆಗಸ್ಟ್ 23ರ ಸುಮಾರಿಗೆ ಚಂದ್ರನ ಕಕ್ಷೆಯನ್ನು ತಲುಪಲಿದೆ. ನಂತರದ 15 ದಿನಗಳಲ್ಲಿ ನೌಕೆ ಚಂದ್ರನ ಮೇಲೆ ಇಳಿಯಲಿದೆ.