ಶ್ರೀಹರಿಕೋಟಾ: ಚಂದಿರನ ಅಂಗಳಕ್ಕೆ ಲಗ್ಗೆ ಇಡಲು ಇಸ್ರೊ ಅಭೂತಪೂರ್ವ ತಯಾರಿಸಿ ನಡೆಸಿದೆ. ನಾಳೆ (ಶುಕ್ರವಾರ) ಮಧ್ಯಾಹ್ನ 2.35ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದೆ. ರಾಕೆಟ್ ಉಡಾವಣೆಯನ್ನು ಮನೆಯಲ್ಲಿಯೇ ಕುಳಿತು ನೇರಪ್ರಸಾರ ವೀಕ್ಷಣೆಗೆ ಇಸ್ರೊ ಅವಕಾಶ ನೀಡಿದೆ.

ಇಸ್ರೊದ ಅಧಿಕೃತ ವೆಬ್‌ಸೈಟ್, ಫೇಸ್‌ಬುಕ್, ಯುಟ್ಯೂಬ್ ಚಾನೆಲ್‌ನಲ್ಲಿ ಹಾಗೂ ಡಿಡಿ ನ್ಯಾಷನಲ್ ವಾಹಿನಿಯಲ್ಲಿ ನಾಳೆ ಮಧ್ಯಾಹ್ನ 2ರಿಂದ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಈ ಬಗ್ಗೆ ಇಸ್ರೊ ಅಧಿಕೃತ ಟ್ವಿಟರ್ ಖಾತೆಯಲ್ಲಿ ಲಿಂಕ್ ಸಹಿತ ಮಾಹಿತಿ ಹಂಚಿಕೊಂಡಿದೆ.
ಚಂದ್ರನ ದಕ್ಷಿಣ ಧ್ರುವದ ಬಳಿಯ ನಾಲ್ಕು ಕಿ.ಮೀ ಉದ್ದದ ಮತ್ತು 2.5 ಕಿ.ಮೀ ಅಗಲದ ಪ್ರದೇಶವು ಆಗಸ್ಟ್ ಮೂರನೇ ವಾರದಲ್ಲಿ 'ಚಂದ್ರಯಾನ-3' ಇಳಿಯುವ ಜಾಗವಾಗಿರಲಿದೆ. ಇಸ್ರೊ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಈ ಬಾರಿಯ ಕಾರ್ಯಾಚರಣೆಯಲ್ಲಿ ಹಲವು ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ.