HEALTH TIPS

ಕಕ್ಷೆಗೆ ಸೇರಿದ ಚಂದ್ರಯಾನ-3: ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಹರ್ಷ

               ಶ್ರೀಹರಿಕೋಟಾ: ಚಂದ್ರಯಾನ-3ಕ್ಕೆ ನಿಯೋಜನೆಗೊಂಡಿದ್ದ ಮಾರ್ಕ್‌-3 ರಾಕೆಟ್‌ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಹರ್ಷ ವ್ಯಕ್ತಪಡಿಸಿದ್ದಾರೆ.

                 ಎಲ್‌ವಿಎಂ3- ಮಾರ್ಕ್‌3 ಅತ್ಯಂತ ಯಶಸ್ವಿಯಾಗಿ ಲ್ಯಾಂಡರ್ ಹಾಗೂ ರೋವರ್‌ ಹೊತ್ತ ಘಟಕವನ್ನು ನಿಗದಿತ ಕಕ್ಷೆಗೆ ಸೇರಿಸಿದೆ.


                    ಈ ಯೋಜನೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಅವರು ತಿಳಿಸಿದರು.

             'ಈ ಎಲ್ಲಾ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಇಳಿಯುವವರೆಗೂ ನಿರಂತರವಾಗಿ ಯೋಜನೆಯನ್ನು ನಿರ್ವಹಿಸಲಾಗುವುದು' ಎಂದು ಸೋಮನಾಥ್‌ ಹೇಳಿದರು.

                   ರಾಕೆಟ್‌ ಜತೆ 36 ಉಪಗ್ರಹಗಳನ್ನು ಕಳುಹಿಸಲಾಗಿದೆ. 9 ಹಂತಗಳಲ್ಲಿರುವ 16 ಉಪಗ್ರಹಗಳು ಈಗಾಗಲೇ ಮಾಹಿತಿ ನೀಡಲು ಆರಂಭಿಸಿವೆ ಎಂದು ತಜ್ಞರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries