ಮಾಸ್ಕೋ: ರಷ್ಯಾ ರಾಷ್ಟ್ರದ ಮಾಸ್ಕೋದಲ್ಲಿನ ಶಾಪಿಂಗ್ ಮಾಲ್ ವೊಂದರಲ್ಲಿ ಬಿಸಿನೀರಿನ ಪೈಪ್ ಒಡೆದ ಪರಿಣಾಮ ನಾಲ್ವರು ಸಾವನ್ನಪ್ಪಿ, 10 ಮಂದಿಗೆ ಗಾಯವಾಗಿರುವ ಘಟನೆ ಶನಿವಾರ ನಡೆದಿದೆ.
ಘಟನೆಯಲ್ಲಿ 10 ಮಂದಿ ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮೇಯರ್ ಸೆರ್ಗೆಯ್ ಸೊಬಯಾನಿನ್ ಹೇಳಿದ್ದಾರೆ.
ವ್ರೆಮೆನಾ ಗೋಡಾ (ದಿ ಸೀಸನ್ಸ್) ಎಂದು ಕರೆಯಲ್ಪಡುವ ಮಾಲ್ ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. 2007 ರಲ್ಲಿ ಪ್ರಾರಂಭವಾದ ಈ ಶಾಪಿಂಗ್ ಮಾಲ್'ನಲ್ಲಿ 150 ಕ್ಕೂ ಹೆಚ್ಚು ಮಳಿಗೆಗಳಿವೆ.