ನವದೆಹಲಿ: ಉಕ್ರೇನ್ ಯುದ್ಧದ ಕಾರಣದಿಂದ ಭಾರತಕ್ಕೆ ಪೂರೈಸುವ ಕಚ್ಚಾ ತೈಲದ ಮೇಲಿನ ರಿಯಾಯಿತಿಯನ್ನು ರಷ್ಯಾ 4 ಡಾಲರ್‌ನಷ್ಟು ತಗ್ಗಿಸಿದೆ. ಮತ್ತೊಂದೆಡೆ, ರಷ್ಯಾ ಸ್ಥಾಪಿಸಿದ ತೈಲ ಸಾರಿಗೆ ಕಂಪನಿಗಳ ಶುಲ್ಕಗಳು ಇನ್ನೂ ಹೆಚ್ಚಿವೆ. ಇದು ದೇಶೀಯ ತೈಲ ಬೆಲೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವರದಿ ತಿಳಿಸಿದೆ.
ಪ್ರಸ್ತುತ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬೆಲೆ ನಿಯಂತ್ರಣದಿಂದಾಗಿ ರಷ್ಯಾವು ಭಾರತಕ್ಕೆ ಕಚ್ಚಾ ತೈಲವನ್ನು ಬ್ಯಾರೆಲ್‌ಗೆ 60ಡಾಲರ್ ಗಿಂತ ಕಡಿಮೆ ಮಾರಾಟ ಮಾಡುತ್ತಿದೆ. ಆದರೆ ಬಾಲ್ಟಿಕ್ ಮತ್ತು ಕಪ್ಪು ಸಮುದ್ರದಿಂದ ಭಾರತದ ಪಶ್ಚಿಮ ಕರಾವಳಿಗೆ ತರಲು ಪ್ರತಿ ಬ್ಯಾರೆಲ್ 11 ರಿಂದ 19ಡಾಲರ್ ವರೆಗೆ ಹಡಗು ಶುಲ್ಕ ವಿಧಿಸುತ್ತದೆ. ಇದು ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿದೆ. ಇದಕ್ಕಾಗಿ, ರಷ್ಯಾದಲ್ಲಿರುವ 100 ಕ್ಕೂ ಹೆಚ್ಚು ಟ್ಯಾಂಕರ್‌ಗಳಲ್ಲಿ ಕೆಲವನ್ನು ಭಾರತಕ್ಕೆ ತೈಲ ಪೂರೈಸಲು ಬಳಕೆ ಮಾಡಲಾಗುತ್ತಿದ್ದು, ಇವುಗಳಿಗೆ ಹೆಚ್ಚಿನ ಬೆಲೆ ವಿಧಿಸಲಾಗುತ್ತಿದೆ.
ಕಳೆದ ಪೆಬ್ರವರಿಯಲ್ಲಿ ರಷ್ಯಾವು ಏಷ್ಯಾದ ಜಪಾನ್ ಸೇರಿ ಯುರೋಪಿಯನ್ ಖರೀದಾರರನ್ನು ದೂರವಿಟ್ಟಿತ್ತು.
ಈ ರಿಯಾಯಿತಿ ಕಡಿತವು ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಹಿಂದುಸ್ತಾನ್ ಪ್ರೈವೇಟ್ ಲಿಮಿಟೆಡ್, ಭಾರತ್ ಪೆಟ್ರೋಲಿಯಮ್ ಲಿಮಿಟೆಡ್, ಮಂಗಳೂರು ರಿಪೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಮತ್ತು ಎಚ್‌ಪಿಸಿಎಲ್ ಮಿತ್ತಲ್ ಎನರ್ಜಿ ಲಿಮಿಟೆಡ್ ಸೇರಿದಂತೆ ಖಾಸಗಿ ತೈಲ ಕಂಪನಿಗಳ ಮೇಲೆಯೂ ಪರಿಣಾಮ ಬೀರಲಿದೆ.