HEALTH TIPS

ಕೃತಕ ಬುದ್ಧಿಮತ್ತೆಯ ಅಪಾಯಗಳ ಬಗ್ಗೆ 40 ವರ್ಷಗಳ ಹಿಂದೆಯೇ ಎಚ್ಚರಿಸಿದ್ದೆ: ಕೆಮರೂನ್

               ಲಾಸ್ ಏಂಜಲೀಸ್: ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI-Artificial Intelligence) ಸಂಚಲನವನ್ನೇ ಉಂಟು ಮಾಡಿದೆ. ಇದರ ಪರ-ವಿರೋಧದ ಬಗ್ಗೆ ವ್ಯಾಪಕ ಚರ್ಚೆಗಳೇ ನಡೆಯುತ್ತಿವೆ. ಎಐ ಮಾಡಬಹುದಾದ ಅನಾಹುತಗಳದ್ದೇ ಚರ್ಚೆಗಳು ತುಸ ಹೆಚ್ಚು.

                  ಹಾಲಿವುಡ್‌ನ ಖ್ಯಾತ ಸಿನಿಮಾ ನಿರ್ದೇಶಕ ಜೇಮ್ಸ್ ಕೆಮರೂನ್ ಅವರೂ ಸಹ AI ಸಂಭಾವ್ಯ ಅಪಾಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

                 ಅವರು ಇತ್ತೀಚೆಗೆ ಸಿಟಿವಿ ನ್ಯೂಸ್ ಎಂಬ ಟಿವಿ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಕೃತಕ ಬುದ್ಧಿಮತ್ತೆ ಬಗ್ಗೆ ಎಚ್ಚರಿಸಿದ್ದಾರೆ. 'ಗೆಳೆಯರೇ ನಾನು ನನ್ನ 'ದಿ ಟರ್ಮಿನೇಟರ್' (The Terminator) ಸಿನಿಮಾದಲ್ಲಿ ಕೃತಕ ಬುದ್ಧಿಮತ್ತೆ ಸಂಭಾವ್ಯ ಅಪಾಯಗಳ ಬಗ್ಗೆ 40 ವರ್ಷಗಳ ಹಿಂದೆಯೇ ಎಚ್ಚರಿಸಿದ್ದೆ. ಆದರೆ, ನೀವು ಕೇಳಲಿಲ್ಲ, ಈಗ ಅದು ನಮ್ಮ ಮುಂದೆ ಬಂದು ನಿಂತಿದೆ' ಎಂದು ಹೇಳಿದ್ದಾರೆ.

               'ನನ್ನ ಪ್ರಕಾರ ಆಯುಧಗಳನ್ನು ಕೃತಕ ಬುದ್ಧಿಮತ್ತೆಗೆ ಒಳಪಡಿಸುವುದು ಹೆಚ್ಚು ಅಪಾಯಕಾರಿ. ಅದು ಪರಮಾಣು ಬಾಂಬ್‌ಗಿಂತಲೂ ಹೆಚ್ಚು ಪರಿಣಾಮಕಾರಿ. ಪರಮಾಣು ಶಸ್ತ್ರಾಸ್ತ್ರಗಳಿಗೆ ಅದು ಪೈಪೋಟಿ ಕೊಡಬಲ್ಲದು. ಇದರ ವಿರುದ್ಧ ನಾವು ಖಂಡಿತವಾಗಿಯೂ ಆಲೋಚಿಸಬೇಕಿದೆ' ಎಂದಿದ್ದಾರೆ.

               'ಯುದ್ಧರಂಗದಲ್ಲಿ ಎದುರಾಳಿಗಳು ಕೃತಕ ಬುದ್ಧಿಮತ್ತೆ ತಂದರೆ ನಾವು ಮನುಷ್ಯರು ಕಂಪ್ಯೂಟರ್ ವೇಗದಲ್ಲಿ ಪ್ರತಿಕ್ರಿಯಿಸಲು ಆಗುವುದಿಲ್ಲ' ಎಂದು ಎಚ್ಚರಿಸಿದ್ದಾರೆ.

                  ಹಾಲಿವುಡ್ ನಟ ಅರ್ನಾಲ್ಡ್ ಶ್ವಾಜಿನೇಗರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ 'ದಿ ಟರ್ಮಿನೇಟರ್' ಸಿನಿಮಾ 1984 ರಲ್ಲಿ ತೆರೆ ಕಂಡಿತ್ತು. ಈ ಸಿನಿಮಾದಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸಿರುವ ರೊಬೊ ಮಾನವನನ್ನು ನಿರ್ಮಿಸಿ ಅದರಿಂದಾಗುವ ಅನಾಹುತಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಳಲಾಗಿತ್ತು. ಈ ಚಿತ್ರದಲ್ಲಿ ಅರ್ನಾಲ್ಡ್ ಟರ್ಮಿನೇಟರ್ ಪಾತ್ರದಲ್ಲಿ (An artificial intelligence machine) ಅಭಿನಯಿಸಿ ಮಿಂಚಿದ್ದರು. ಈ ಚಿತ್ರದ ಪ್ರೇರಣೆಯಿಂದ ಹಾಲಿವುಡ್‌ನಲ್ಲಿ 10 ಕ್ಕೂ ಹೆಚ್ಚು ಟರ್ಮಿನೇಟರ್ ಸರಣಿಯ ಸಿನಿಮಾಗಳು ಬಂದಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries