ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಅಭಿಪ್ರಾಯಗಳನ್ನು ಕಳುಹಿಸಲು ನಿಗದಿಪಡಿಸಿರುವ ಗಡುವು ಕೊನೆಗೊಳ್ಳುವುದಕ್ಕೂ ಎರಡು ದಿನ ಮುನ್ನದ ವೇಳೆಗೆ ಸುಮಾರು 46 ಲಕ್ಷ ಪ್ರತಿಕ್ರಿಯೆಗಳು ಸಲ್ಲಿಕೆಯಾಗಿವೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಮುಂದಿನ ದಿನಗಳಲ್ಲಿ ಆಯೋಗವು ಕೆಲ ಸಂಘಟನೆಗಳು ಮತ್ತು ಜನರೊಂದಿಗೆ ಈ ಕುರಿತು ವೈಯಕ್ತಿಕ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಸೋಮವಾರ ಸಂಜೆಯ ವೇಳೆಗೆ ಸುಮಾರು 46 ಲಕ್ಷ ಪ್ರತಿಕ್ರಿಯೆಗಳು ಸಲ್ಲಿಕೆಯಾಗಿವೆ.
ಕಾನೂನು ಆಯೋಗವು ಜೂನ್ 14ರಂದು ಯುಸಿಸಿ ಸಂಬಂಧ ಹೊಸದಾಗಿ ಸಮಾಲೋಚನಾ ಪ್ರಕ್ರಿಯೆಗಳಿಗೆ ಚಾಲನೆ ನೀಡಿತು. ಈ ಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು, ಮಾನ್ಯತೆ ಪಡೆದ ಧಾರ್ಮಿಕ ಸಂಘ ಸಂಸ್ಥೆಗಳು, ಭಾಗೀದಾರರು ಅಭಿಪ್ರಾಯಗಳನ್ನು ಪಡೆಯುತ್ತಿದೆ.