ಲಡಾಕ್: ಕಾರ್ಗಿಲ್‌ನ ಉತ್ತರ ಲಡಾಕ್‌ನಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.7 ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಭೂಕಂಪದ ಕೇಂದ್ರಬಿಂದು ಕಾರ್ಗಿಲ್‌ನ ಉತ್ತರಕ್ಕೆ 401 ಕಿಮೀ ಮತ್ತು 150 ಕಿಮೀ ಆಳದಲ್ಲಿ ಇತ್ತು ಎಂದು ಎನ್‌ಸಿಎಸ್ ಟ್ವೀಟ್‌ನಲ್ಲಿ ತಿಳಿಸಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು(ಎನ್‌ಸಿಎಸ್) ದೇಶದಲ್ಲಿ ಸಂಭವಿಸುವ ಭೂಕಂಪದ ಚಟುವಟಿಕೆಗಳನ್ನು ಪತ್ತೆ ಮಾಡಲು ಇರುವ ಭಾರತ ಸರ್ಕಾರದ ಸಂಸ್ಗೆಯಾಗಿದೆ.
ಈ ಹಿಂದೆ ಜೂನ್ 18ರಂದು 24 ಗಂಟೆಗಳಲ್ಲಿ ಮೂರು ಭೂಕಂಪಗಳು ಲಡಾಕ್‌ನಲ್ಲಿ ಸಂಭವಿಸಿದ್ದವು. ಜೂನ್ 18 ರಂದು ಲಡಾಖ್‌ನ ಲೇಹ್ ಜಿಲ್ಲೆಯ ಈಶಾನ್ಯಕ್ಕೆ 279 ಕಿಲೋಮೀಟರ್ ದೂರದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಬೆಳಗ್ಗೆ 8.28ಕ್ಕೆ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿತ್ತು. ಅದಕ್ಕೂ ಮೊದಲು, ನಸುಕಿನ ವೇಳೆ, 4.1 ರ ತೀವ್ರತೆಯ ಭೂಕಂಪವು ಲಡಾಕ್‌ನ ಲೇಹ್ ಜಿಲ್ಲೆಯ ಈಶಾನ್ಯಕ್ಕೆ 295 ಕಿಲೋಮೀಟರ್ ದೂರದಲ್ಲಿ ಸಂಭವಿಸಿತ್ತು. ಜೂನ್ 17ರ ರಾತ್ರಿ 9.44ಕ್ಕೆ 4.5ರ ತೀವ್ರತೆಯ ಭೂಕಂಪವು ಸಂಭವಿಸಿತ್ತು.