HEALTH TIPS

ಕೇರಳದಲ್ಲಿ ವಿಶ್ವದ ಮೊದಲ ಸತ್ಯಸಾಯಿಬಾಬಾ ಮಂದಿರ: 4 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ

            ತಿರುವನಂತಪುರಂ: ಸಾಯಿಗ್ರಾಮ ಗ್ರಾಮದಲ್ಲಿರುವ ವಿಶ್ವದ ಮೊದಲ ಸತ್ಯಸಾಯಿಬಾಬಾ ಮಂದಿರವನ್ನು ಆಗಸ್ಟ್ 4ರಂದು ಮಧ್ಯಾಹ್ನ 12.30ಕ್ಕೆ ಜಗತ್ತಿಗೆ ಸಮರ್ಪಿಸುವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅಧ್ಯಕ್ಷತೆ ವಹಿಸುವರು.

          ತಿರುವನಂತಪುರಂನ ಖೋಡೈಕ್ಕಲ್ ಸಾಯಿಗ್ರಾಮ್‍ನಲ್ಲಿರುವ ಸತ್ಯಸಾಯಿ ಬಾಬಾ ದೇವಾಲಯವನ್ನು 16 ಗ್ರಾನೈಟ್ ಕಂಬಗಳಿಂದ ನಿರ್ಮಿಸಲಾಗಿದೆ. ಅದರಲ್ಲಿ 21 ಅಡಿ ಉದ್ದದ 8 ಗ್ರಾನೈಟ್ ಕಂಬಗಳನ್ನು ಮಹಾಬಲಿಪುರಂನಲ್ಲಿ ಮಾಡಿ ಇಲ್ಲಿಗೆ ತರಲಾಗಿದೆ. 8 ಗ್ರಾನೈಟ್ ಪಿಲ್ಲರ್‍ಗಳ ನಿರ್ಮಾಣವೇ ಒಂದು ವರ್ಷ ತೆಗೆದುಕೊಂಡಿತು. ಈ ದೇವಾಲಯವನ್ನು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ವಿಶ್ವದ ಮೊದಲ ಸತ್ಯಸಾಯಿ ಬಾಬಾ ದೇವಾಲಯವಾಗಿದೆ. ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಸಹೋದರಿ ಪುತ್ರ ಶಂಕರ್ ರಾಜು ಈ ಕ್ಷೇತ್ರಕ್ಕೆ ಶಂಕುಸ್ಥಾಪನೆ ಮಾಡಿದ್ದರು. ದೇವಾಲಯದ ನಿರ್ಮಾಣ ಪೂರ್ಣಗೊಂಡ ನಂತರ ಸಾಯಿಗ್ರಾಮದಲ್ಲಿರುವ ಸತ್ಯಸಾಯಿಬಾಬಾರವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. 2015 ರಲ್ಲಿ, ಶಬರಿಮಲೆ ಮಾಜಿ ಮೇಲ್ಶಾಂತಿ ಇಡಮನ ಇಲ್ಲತ್ ಬಾಲಮುರಳಿ ತಿರುಮೇನಿ ಅವರ ಸಾರಥ್ಯದಲ್ಲಿ ಭಗವಾನ್ ಸತ್ಯಸಾಯಿಬಾಬಾ ಅವರ ಕುಂಭಾಭೀಷೇಕ ಮತ್ತು ಪ್ರಾಣಪ್ರತಿಷ್ಠೆ ನಡೆಯಿತು.

          ಶ್ರೀ ಸತ್ಯಸಾಯಿ ಅನಾಥಾಶ್ರಮ ಟ್ರಸ್ಟ್ ಕೇರಳದ ಉಚಿತ ಸೇವಾ ಚಟುವಟಿಕೆಗಳು ಸುಪ್ರಸಿದ್ಧವಾಗಿದೆ ಮತ್ತು ಶ್ರೀ ಸತ್ಯಸಾಯಿ ಅನಾಥಾಶ್ರಮ ಟ್ರಸ್ಟ್ ಕೇರಳದ ಬಾಬಾರ ಎಲ್ಲಾ ಚಟುವಟಿಕೆಗಳನ್ನು ಅನುಕರಿಸುವ ಮೂಲಕ ಇಡೀ ಜಗತ್ತಿಗೆ ಮಾದರಿಯಾಗಿದೆ. ಶ್ರೀ ಸತ್ಯ ಸಾಯಿ ಅನಾಥಾಶ್ರಮ ಟ್ರಸ್ಟ್ ಕೇರಳವು ಭಾರತದ ಅತಿದೊಡ್ಡ ಎನ್‍ಜಿಒ ಆಗಿದ್ದು, ಕಳೆದ 30 ವರ್ಷಗಳಲ್ಲಿ 126 ಸಂಸ್ಥೆಗಳು ಮತ್ತು 200 ಕ್ಕೂ ಹೆಚ್ಚು ಯೋಜನೆಗಳೊಂದಿಗೆ ಜನರಿಗೆ ಸಂಪೂರ್ಣವಾಗಿ ಉಚಿತವಾಗಿ ಕಾರ್ಯನಿರ್ವಹಿಸುತ್ತಿದೆ. 

          ಸತ್ಯಸಾಯಿಬಾಬಾ ಸರ್ವಧರ್ಮ ಭ್ರಾತೃತ್ವದ ಪ್ರತೀಕ. ಮಾಧವ ಸೇವೆಯೇ ಮಾನವ ಸೇವೆ ಎಂದು ಭಗವಾನ್ ಕಾರ್ಯಗಳ ಮೂಲಕ ತೋರಿಸಿಕೊಟ್ಟರು. ಪುಟ್ಟ ಗ್ರಾಮವಾಗಿದ್ದ ಪುಟ್ಟಪರ್ತಿಯು ಭಗವಂತನ ಜನ್ಮದಿಂದ ಪವಿತ್ರ ಯಾತ್ರಾ ಕೇಂದ್ರವಾಗಿ ಮಾರ್ಪಟ್ಟು ಇಂದು ಭಗವಂತನ ಕಾರ್ಯವೈಖರಿಯಿಂದ ಜಗತ್ತಿನ ಗಮನ ಸೆಳೆಯುತ್ತಿರುವುದು ದೊಡ್ಡ ಉದಾಹರಣೆ. ಒಂದು ರೂಪಾಯಿ ಪಡೆಯದೆ ಏಷ್ಯಾದ ಎರಡು ದೊಡ್ಡ ಉಚಿತ ಸೂಪರ್ ಸ್ಪೆμÁಲಿಟಿ ಆಸ್ಪತ್ರೆಗಳು, ಲಕ್ಷಾಂತರ ಜನರಿಗೆ ಕುಡಿಯುವ ನೀರು ಒದಗಿಸುವ ಬೃಹತ್ ಯೋಜನೆ ಮತ್ತು ಸುಮಾರು 55 ವರ್ಷಗಳಿಂದ ಉಚಿತವಾಗಿ ನಡೆಯುತ್ತಿರುವ ಸತ್ಯಸಾಯಿ ವಿಶ್ವವಿದ್ಯಾಲಯ ಸೇರಿದಂತೆ ಸಂಸ್ಥೆಗಳನ್ನು ಭಗವಾನ್ ಜಾರಿಗೆ ತಂದಿದ್ದಾರೆ. ಭಗವಾನ್ ಪ್ರಾರಂಭಿಸಿದ ಸಂಸ್ಥೆಗಳು ಅವರ ಸಮಾಧಿಯ ನಂತರವೂ ಯಾವುದೇ ಬದಲಾವಣೆಯಿಲ್ಲದೆ ಮತ್ತು ಯಾವುದೇ ಚಟುವಟಿಕೆಗಳಲ್ಲಿ ಯಾವುದೇ ಕಡಿತವಿಲ್ಲದೆ ಮುಂದುವರಿಯುತ್ತದೆ. ಅವರ ಶಿಷ್ಯರು ಮತ್ತು ಕೋಟ್ಯಂತರ ಭಕ್ತರು ಅವರ ಮಾತನ್ನು ಮಂತ್ರದಂತೆ ಅನುಸರಿಸುತ್ತಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries