ಮಳೆಗಾಲದಲ್ಲಿ ಡೆಂಗ್ಯೂ ಅಪಾಯ ಹೆಚ್ಚಾಗಿ ಕಾಡುವುದು. ಈ ಸಮಯದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುವುದರಿಂದ ಡೆಂಗ್ಯೂ ಕೂಡ ಹೆಚ್ಚಾಗುವುದು. ಡೆಂಗ್ಯೂ ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೆ ಅಪಾಯ ಉಂಟಾಗುವುದರಿಂದ ಡೆಂಗ್ಯೂ ಕಾಯಿಲೆ ನಿರ್ಲಕ್ಷ್ಯ ಮಾಡಲೇಬಾರದು. ಡೆಂಗ್ಯೂವಿಗೆ ಔಷಧ ಪಡೆಯುವುದರ ಜೊತೆಗೆ ಕೆಲವೊಂದು ಮನೆಮದ್ದುಗಳು ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಡೆಂಗ್ಯೂ ಕಾಯಿಲೆ ಬಂದಾಗ ದೊಡ್ಡ ಸಮಸ್ಯೆಯೆಂದರೆ ಪ್ಲೇಟ್‌ಲೆಟ್ ಕಡಿಮೆಯಾಗುವುದು, ಪ್ಲೇಟ್‌ಲೆಟ್ ತುಂಬಾ ಕಡಿಮೆಯಾದರೆ ಪ್ರಾಣಕ್ಕೆ ಅಪಾಯ, ಈ ಮನೆಮದ್ದುಗಳು ಪ್ಲೇಟ್‌ಲೆಟ್ ಹೆಚ್ಚಿಸಲು, ಡೆಂಗ್ಯೂ ಕಾಯಿಲೆಯಿಂದ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ:ಡೆಂಗ್ಯೂ ಕಾಯಿಲೆಯ ಲಕ್ಷಣಗಳು
- 3 ವಾರಕ್ಕಿಂತ ಅಧಿಕ ದಿನ ಜ್ವರ
- ವಾಂತಿ-ಬೇಧಿ
- ಸುಸ್ತು
- ತ್ವಚೆಯಲ್ಲಿ ಗುಳ್ಳೆಗಳು ಕಂಡು ಬರುವುದು
- ಸಂಧಿನೋವು
- ಕಣ್ಣುಗಳಲ್ಲಿ ನೋವು
- ಮೈಕೈ ನೋವು
- ಗ್ರಂಥಿಗಳಲ್ಲಿ ಊತ
ಗಂಭೀರ ಲಕ್ಷಣಗಳು
- ಸುಸ್ತು
- ರಕ್ತ ವಾಂತಿ
- ಆಗಾಗ ವಾಂತಿ ಮಾಡುವುದು
- ದವಡೆಗಳಲ್ಲಿ ರಕ್ತಸ್ರಾವ
- ಅಸ್ವಸ್ಥತೆ
- ಕಿಬ್ಬೊಟ್ಟೆ ನೋವು
- ತುಂಬಾನೇ ರಕ್ತಸ್ರಾವ
ಈ ಮನೆಮದ್ದು ಪ್ಲೇಟ್‌ಲೆಟ್ ಹೆಚ್ಚಿಸಲು, ಡೆಂಗ್ಯೂವಿನಿಂದ ಚೇತರಿಸಲು ಸಹಕಾರಿ:
ಕಹಿಬೇವಿನ ಎಲೆ
ಕಹಿಬೇವಿನ ಎಲೆ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಈ ಕಹಿಬೇವಿನ ಎಲೆಯಲ್ಲಿ ನಿಂಬಿಯಿನ್ ಮತ್ತು ನಿಂಬ್ಡಿನ್ ಎರಡು ಅಂಶವಿರುವುದರಿಂದ ಇದು ಆ್ಯಂಟಿಇನ್‌ಫ್ಲೇಮಟರಿ ಅಂಶವಿರುವುದರಿಂದ ಇದು ಪ್ಲೇಟ್‌ಲೆಟ್ ಹೆಚ್ಚಿಸಲು ಸಹಕಾರಿ.
ಕುಡಿಯುವ ನೀರಿಗೆ ಸ್ವಲ್ಪ ಕಹಿಬೇವಿನ ಎಲೆ ಹಾಕಿ ಕುದಿಸಿ ಅದನ್ನು ಕುಡಿಯುವುದು ಒಳ್ಳೆಯದು. ನಿಂಬೆ ಜ್ಯೂಸ್‌ಗೆ ಸ್ವಲ್ಪ ಕಹಿಬೇವಿನ ರಸ ಹಾಕಿ ಕುಡಿಯಬಹುದು.
ಪಪ್ಪಾಯಿ ಎಲೆಯ ರಸ ಸ್ವಲ್ಪ ತೆಗೆದ ಕುಡಿಯುವುದರಿಂದ ಪ್ಲೇಟ್‌ಲೆಟ್ ಹೆಚ್ಚಾಗುವುದು. ಪಪ್ಪಾಯಿ ಎಲೆ ಪ್ಲೇಟ್‌ಲೆಟ್ ಹೆಚ್ಚಿಸುತ್ತದೆ ಎಂಬುವುದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ. ಆದರೆ ಪಪ್ಪಾಯಿ ಜ್ಯೂಸ್ ನೀವು ಮಿತಿಯಲ್ಲಿ ಕುಡಿಯಬೇಕು. ಮೂರು ಹೊತ್ತು ಒಂದೊಂದು ಸ್ಪೂನ್ ರಸ ಕುಡಿದರೆ ಪ್ಲೇಟ್ ಲೆಟ್ ತುಂಬಾನೇ ಹೆಚ್ಚಾಗುವುದು. ಅಧಿಕ ಕುಡಿಯಬೇಡಿ ಬೇಧಿ ಉಂಟಾಗುಬಹುದು, ಮಿತಿಯಲ್ಲಿ ಕುಡಿಯಬೇಕು.
ಅಮೃತ ಬಳ್ಳಿ ಕೂಡ ಡೆಂಗ್ಯೂ ಜ್ವರವಿರುವವರಿಗೆ ತುಂಬಾನೇ ಒಳ್ಳೆಯದು. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಚಯಪಚಯಕ್ರಿಯೆ ಉತ್ತಮವಾಗಿ ನಡೆಯಲು ಕೂಡ ಸಹಕಾರಿ. ರೋಗ ನಿರೋಧಕ ಶಕ್ತಿ ಹೆಚ್ಚಾದರೆ ಬೇಗನೆ ಚೇತರಿಸಿಕೊಳ್ಳಲು ಸಹಾಯವಾಗುವುದು. ಬೆಳಗ್ಗೆ ಎದ್ದಾಗ ಅಮೃತ ಬಳ್ಳಿ ಹಾಕಿ ಕಾಯಿಸಿದ ನೀರು ಕುಡಿಯಿರಿ. ಅಮೃತಬಳ್ಳಿ ಅತ್ಯುತ್ತಮವಾದ ಮನೆಮದ್ದಾಗಿದೆ.
ರ್ಲಿ
ಬಾರ್ಲಿಯಲ್ಲಿ ವಿಟಮಿನ್ ಬಿ1, ಬಿ2,ಬಿ6, ಬಿ12, ಫಾಲಿಕ್ ಆಮ್ಲ, ಕಬ್ಬಿಣದಂಶ, ಕ್ಯಾಲ್ಸಿಯಂ, ಪೊಟಾಷ್ಯಿಯಂ, ಮೆಗ್ನಿಷ್ಯಿಯಂ ಇರುವುದರಿಂದ ಡೆಂಗ್ಯೂವಿನಿಂದ ಬೇಗನೆ ಚೇತರಿಸಿಕೋಳ್ಳಲು ಸಹಕಾರಿ. ಡೆಂಗ್ಯೂ ಬಂದ್ರೆ ಎಷ್ಟು ಸಮಯವಾದ್ರೂ ಸುಸ್ತು ಹೋಗಲ್ಲ, ಡೆಂಗ್ಯೂ ಜ್ವರ ಕಡಿಮೆಯಾಗಿ ಒಂದು ತಿಂಗಳಾದರೂ ಸುಸ್ತು ಇರುತ್ತದೆ, ಬಾರ್ಲಿ ತಿನ್ನುವುದರಿಂದ ಸುಸ್ತು ಕಡಿಮೆಯಾಗಲು ಸಹಾಯ ಮಾಡುತ್ತದೆ.
ಮೆಣಸು
ನೀವು ಕಾಳು ಮೆಣಸು, ತುಳಸಿ ಹಾಕಿ ಕುದಿಸಿ ಅದಕ್ಕೆ ಬೇಕಿದ್ದರೆ ಸ್ವಲ್ಪ ಜೇನು ಹಾಕಿ ಕುಡಿದರೆ ರೋಗ ನಿರೋಧಕ ಶಕ್ತಿ ಚೆನ್ನಾಗಿರುತ್ತದೆ. ಎರಡು ಲೀಟರ್ ನೀರಿಗೆ 4 ಎಲೆ ತುಳಸಿ, 4 ಕಾಳು ಕಾಳು ಮೆಣಸು ಹಾಕಿ ಕುದಿಸಿ ಆ ನೀರನ್ನು ಕುಡಿಯಿರಿ, ತುಂಬಾ ಒಳ್ಳೆಯದು. ಹೆಚ್ಚು ಬಳಸಬೇಡಿ ಉಷ್ಣಾಂಶ ಹೆಚ್ಚಾಗುವುದು.