ರಾಯಪುರ: ಛತ್ತೀಸಗಢ ಕಾಂಗ್ರೆಸ್ ಅಧ್ಯಕ್ಷರಾಗಿ ದೀಪಕ್ ಬೈಜ್ ಅವರನ್ನು ನೇಮಿಸಿ, 50ಕ್ಕಿಂತ ಕಡಿಮೆ ವಯಸ್ಸಿನವರಿಗೆ ಪಕ್ಷದಲ್ಲಿ ಅರ್ಧದಷ್ಟು ಸ್ಥಾನಗಳನ್ನು ನೀಡುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಗುರುವಾರ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಶಾಸಕ ಮೋಹನ್ ಮರ್ಕಂ ಅವರ ಸ್ಥಾನಕ್ಕೆ ಬಸ್ತರ್ ಕ್ಷೇತ್ರದ ಸಂಸದರಾಗಿರುವ ದೀಪಕ್ ಅವರನ್ನು ಬುಧವಾರ ನೇಮಕ ಮಾಡಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಭೂಪೇಶ್ ಬಘೇಲ್, ಮೋಹನ್ ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಎರಡು ಅವಧಿಗಳನ್ನು ಪೂರ್ಣಗೊಳಿಸಿದ್ದಾರೆ. ಎಲ್ಲಾ ರಾಜ್ಯಗಳಲ್ಲೂ ಇಂತಹ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.
ಪಕ್ಷದಲ್ಲಿ ಅರ್ಧದಷ್ಟು ಸ್ಥಾನಗಳನ್ನು 50 ವರ್ಷದೊಳಗಿನವರಿಗೆ ನೀಡಲು ರಾಯಪುರದಲ್ಲಿ ನಡೆದಿದ್ದ ಎಐಸಿಸಿ ಮಹಾ ಅಧಿವೇಶನದಲ್ಲಿ ನಿರ್ಧರಿಸಲಾಗಿತ್ತು. ದೀಪಕ್ ಬೈಜ್ ಅವರಿಗೆ 42 ವರ್ಷ ಎಂದೂ ಅವರು ತಿಳಿಸಿದ್ದಾರೆ.
ದೀಪಕ್ ಅವರ ನೇಮಕವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಪರಿಣಾಮ ಬೀರಲಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
ಭೂಪೇಶ್ ಬಘೇಲ್ ಅವರ ಹಲವು ನಿರ್ಧಾರಗಳಿಂದ ಮೋಹನ್ ಮರ್ಕಂ ಅವರು ಅಸಮಾಧಾನಗೊಂಡಿದ್ದರು ಎಂದು ಮೂಲಗಳು ಹೇಳಿವೆ.