ತಿರುವನಂತಪುರಂ: ಮಳೆಗಾಲದಲ್ಲಿ ಸಾಂಕ್ರಾಮಿಕ ಜ್ವರ ನಿರಂತರ ಹೆಚ್ಚಳಗೊಳ್ಳುತ್ತಿದೆ. ಐದು ದಿನಗಳಲ್ಲಿ ರಾಜ್ಯದಲ್ಲಿ ಜ್ವರ ಪೀಡಿತರ ಸಂಖ್ಯೆ 50 ಸಾವಿರ ದಾಟಿದೆ.
24 ಮಂದಿ ಜ್ವರದಿಂದ ಸಾವನ್ನಪ್ಪಿದ್ದಾರೆ. ಇಲಿಜ್ವರ, ಡೆಂಗ್ಯೂ ಮತ್ತು ಎಚ್1ಎನ್1 ಜ್ವರದಿಂದ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜ್ವರದಿಂದ ತೀವ್ರ ಅಸ್ವಸ್ಥರಾಗಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸಾಂಕ್ರಾಮಿಕ ರೋಗ ತಡೆಗೆ ರಾಜ್ಯ ನಿಯಂತ್ರಣ ಕೊಠಡಿ ಕಾರ್ಯಾರಂಭ ಮಾಡಿದೆ. ಮಾಹಿತಿಗೆ 9995220557 ಮತ್ತು 9037277026 ಗೆ ಕರೆ ಮಾಡಿ.
ಸಾಂಕ್ರಾಮಿಕ ತಡೆಗಟ್ಟುವಿಕೆ ಸಮನ್ವಯ, ಡೇಟಾ ನಿರ್ವಹಣೆ, ಆಸ್ಪತ್ರೆ ಸೇವೆಗಳು, ಔಷಧ ಲಭ್ಯತೆ, ಪ್ರೋಟೋಕಾಲ್‍ಗಳು ಮತ್ತು ಘಟನೆಯ ಪ್ರತಿಕ್ರಿಯೆಯನ್ನು ನಿಯಂತ್ರಣ ಕೊಠಡಿಯ ಮೂಲಕ ನಿರ್ವಹಿಸಲಾಗುತ್ತದೆ.
ವೈದ್ಯರ ಸಮಿತಿಯನ್ನು ಹೊಂದಿರುವ ದಿಶಾ ಕಾಲ್ ಸೆಂಟರ್ ಮೂಲಕ ಸಾರ್ವಜನಿಕರು ತಮ್ಮ ಎಲ್ಲಾ ಆರೋಗ್ಯ ಸಂಬಂಧಿತ ಪ್ರಶ್ನೆಗಳನ್ನು ಕೇಳಬಹುದು. 104, 1056, 0471 2552056 ಮತ್ತು 2551056, ದಿಶಾ ಅವರ ಸೇವೆಗಳು 24 ಗಂಟೆಗಳ ಕಾಲ ಲಭ್ಯವಿದೆ. ಇದಲ್ಲದೇ ಇ ಸಂಜೀವನಿ ವೈದ್ಯರ ಸೇವೆಯೂ ಲಭ್ಯವಿದೆ. ಮುನ್ನೆಚ್ಚರಿಕೆಗಳು, ತೆಗೆದುಕೊಂಡ ಔಷಧಿಯ ಬಗ್ಗೆ ಅನುಮಾನ, ಯಾವ ಆಹಾರ ಸೇವಿಸಬೇಕು, ಪರೀಕ್ಷೆಯ ಫಲಿತಾಂಶದ ಬಗ್ಗೆ ಅನುಮಾನ, ಮಾನಸಿಕ ಬೆಂಬಲ, ಸೋಂಕು ತಡೆಗಟ್ಟುವಿಕೆ ಇತ್ಯಾದಿಗಳನ್ನು ಚರ್ಚಿಸಬಹುದು. ಸಂಬಂಧಿತ ತಜ್ಞ ವೈದ್ಯರಿಗೆ ಫೆÇೀನ್ ಹಸ್ತಾಂತರಿಸಲಾಗುವುದು. ಆಪ್ತಸಮಾಲೋಚಕರು, ವೈದ್ಯರು ಮತ್ತು ಇ-ಸಂಜೀವಿನಿ ವೈದ್ಯರ ಜೊತೆಗೆ ನಿರ್ದೇಶನಾಲಯ, ಜಿಲ್ಲೆಗಳ ವೈದ್ಯರ ಸೇವೆಯನ್ನೂ ಒದಗಿಸಲಾಗಿದೆ.