ಮಂಜೇಶ್ವರ: ಕಣ್ಣೂರು ವಿಶ್ವವಿದ್ಯಾನಿಲಯದ ಮಂಜೇಶ್ವರ ಕಾನೂನು ಅಧ್ಯಯನ ಕೇಂದ್ರದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕರ ಆಸ್ತಿ ಅಭಿವೃದ್ಧಿ ಯೋಜನೆಯಡಿ 51 ಲಕ್ಷ ರೂ.ಗಳ ಅನುಮೋದನೆ ದೊರೆತಿದೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಮಾಹಿತಿ ನೀಡಿರುವÀರು. ಹೊಸ ತರಗತಿ ಪ್ರವೇಶಾತಿ ವೇಳೆ ಹೆಚ್ಚುವರಿ ಸೌಲಭ್ಯಗಳು ಬೇಕಾಗಿರುವುದರಿಂದ ಆರ್ಥಿಕ ಇಲಾಖೆಯ ವಿಶೇಷ ಅನುಮತಿ ಪಡೆದು ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿಸಿ ಕೂಡಲೇ ಕಾಮಗಾರಿ ಆರಂಭಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿರುವರು.